ಮಂಡ್ಯ: ಲೋಕಸಭೆ ಚುನಾವಣೆ ಬಳಿಕ ಮಂಡ್ಯ ನಗರ ಸಭೆಯ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು ಇಂದು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಅಧ್ಯಕ್ಷಗಾದಿ ಹಿಡಿಯಲು ಮತ್ತೆ ಬದ್ಧ ವೈರಿಗಳ ನಡುವೆ ಮೆಗಾ ಫೈಟ್ ಶುರುವಾಗಿದೆ.
ಅಧಿಕಾರ ಉಳಿಸಿಕೊಳ್ಳುವುದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಒಂದೆಡೆ ಪ್ರತಿಷ್ಠೆ ಯಾದರೆ ಅಧಿಕಾರ ಕಸದುಕೊಳ್ಳಲು ಚೆಲುವರಾಯಸ್ವಾಮಿ ಹಠ ಹಿಡಿದಿದ್ದಾರೆ . 35 ಸದಸ್ಯ ಬಲದ ಮಂಡ್ಯದ ನಗರ ಸಭೆಗೆ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದೆ.
ಸಂಸದ ಕುಮಾರಸ್ವಾಮಿ, ಸ್ಥಳೀಯ ಶಾಸಕ ಗಣಿಗ ರವಿ ಸೇರಿ ಒಟ್ಟು 37 ಮತಗಳಿದ್ದು, ಇದರಲ್ಲಿ ಜೆಡಿಎಸ್ ಸದಸ್ಯರು 18 , ಎಚ್ ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ನ ಸಂಖ್ಯೆ 19 ಆಗಲಿದೆ.
10 ಕಾಂಗ್ರೆಸ್ ಸದಸ್ಯರ ಜೊತೆ ಶಾಸಕ ಗಣಿಗ ರವಿ ಸೇರಿ ಕಾಂಗ್ರೆಸ್ ಮತಗಳು 11 ಆಗಲಿದೆ. ಇನ್ನುಳಿದಂತೆ ಇಬ್ಬರು ಬಿಜೆಪಿ, ಐವರು ಪಕ್ಷೇತರ ಸದಸ್ಯರುಗಳಿದ್ದು, ಅಧ್ಯಕ್ಷ ಅಧ್ಯಕ್ಷಗಾದಿ 19 ಸದಸ್ಯರ ಬಲದ ಅವಶ್ಯಕತೆ ಇದೆ.
ಬಿಜೆಪಿ ಸದಸ್ಯರನ್ನು ಒಳಗೊಂಡಂತೆ ಜೆಡಿಎಸ್ 21 ಮತಗಳ ಲೆಕ್ಕಾಚಾರದಲ್ಲಿದೆ. ಆದರೆ ಮೂವರು ಜೆಡಿಎಸ್ ಸದಸ್ಯರ ಪಕ್ಷಾಂತರದಿಂದ ದಳಪತಿಗಳಿಗೆ ಇದು ತಲೆ ನೋವಾಗಿ ಪರಿಣಮಿಸಿದೆ. ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕಾಗಿ ದಾಳ ಹೂಡಿ ಕಾಂಗ್ರೆಸ್ ಕಡೆ ನಿಕಟಪೂರ್ವ ಅಧ್ಯಕ್ಷ ಎಚ್‌ಎಸ್ ಮಂಜು ಕಾಂಗ್ರೆಸ್ ಕಡೆ ವಾಲಿರುವುದು ಒಂದು ಕಡೆಯಾದರೆ, ಜೆಡಿಎಸ್ನಿಂದ ಮತ್ತಿಬ್ಬರು ಸದಸ್ಯರು ಅಂತರ ಕಾಯ್ದುಕೊಂಡಿರುವುದು ದಳಪತಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
3 ಜೆಡಿಎಸ್ ಬಂಡಾಯ ಸದಸ್ಯರ ಜೊತೆ ಐವರು ಪಕ್ಷೇತರರಿಗೆ ಕಾಂಗ್ರೆಸ್ ಗಾಳ ಹಾಕಿದೆ ಮತ್ತು ಕಾಂಗ್ರೆಸ್ ಸದಸ್ಯರು 3 ಜೆಡಿಎಸ್ ಸದಸ್ಯರು, ಐವರು ಪಕ್ಷೇತರರು ಹಾಗೂ ಓರ್ವ ಶಾಸಕ ಮತ ಸೇರಿ 19 ಮತಗಳ ಲೆಕ್ಕಾಚಾರದಲ್ಲಿ ಕೈ ಪಡೆ ಇದೆ . ಆದರೆ ಆಪರೇಷನ್ ಹಸ್ತಕ್ಕೆ ದಳಪತಿಗಳಿಂದ ರಿವರ್ಸ್ ಆಪರೇಷನ್ ಆಗುತ್ತಿದ್ದು , ಕಾಂಗ್ರೆಸ್ ಸದಸ್ಯ ರಾಮಲಿಂಗಯ್ಯನನ್ನ ತನ್ನಡೆ ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.
3 ಜೆಡಿಎಸ್ ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ರು ಗೆಲ್ಲುವ ವಿಶ್ವಾಸದಲ್ಲಿ ದಳ ಪಡೆಯಿದೆ . 15 JDS, 2 BJP, 1MP ಹಾಗೂ 1 ಕಾಂಗ್ರೆಸ್ ಮತಗಳಿಂದ ಜೆಡಿಎಸ್ ಸರಳ ಬಹುಮತದ ಲೆಕ್ಕಾಚಾರ ಹಾಕಿಕೊಂಡಿದೆ . ಒಟ್ಟಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್ -ಕಾಂಗ್ರೆಸ್ ನೇರ ನೇರ ಗುದ್ದಾಟ ನಡೆಸುತ್ತಿದ್ದು, ಮಂಡ್ಯ ನಗರಸಭೆ ಚುನಾವಣೆ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ.
ಅಧ್ಯಕ್ಷ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ನಗರಸಭೆ ಬಳಿ ಹೆಚ್ಚಿನ ಪೊಲೀಸ್ ನಿಯೋಜನೆಗೊಳಿಸಲಾಗಿದ್ದು, ಬ್ಯಾರಿಕೇಡ್ ಹಾಕಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಧ್ಯಾಹ್ನದ ವೇಳೆಗೆ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಇವೆಲ್ಲದಕ್ಕೂ ತೆರೆ ಬೀಳಲಿದೆ.