ಮಂಡ್ಯ: ಇಂದಿನಿಂದ ಮೈ ಶುಗರ್ ಕಾರ್ಖಾನೆ ಪುನರಂಭಗೊಳ್ಳುತ್ತಿದ್ದು, ಇಂದು ಬಾಯ್ಲರ್ ಗೆ ಅಗ್ನಿ ಸ್ಪರ್ಶದ ಮೂಲಕ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಖಾನೆಗೆ ಚಾಲನೆ ಮಾಡಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಕಾಲಕ್ಕೆ ಆರಂಭವಾಗುತ್ತಿರುವ ಕಾರ್ಖಾನೆ. ಮೈ ಶುಗರ್ ಕಾರ್ಖಾನೆ ಆವರಣದಲ್ಲಿ ಹಸಿರು ತೋರಣ ಕಟ್ಟಿ ಸಿಂಗಾರ ಗೊಳಿಸಲಾಗಿದ್ದು, ಸಂಪ್ರದಾಯದಂತೆ ಗಣಪತಿ ಹೋಮ, ಪೂಜೆ ಮೂಲಕ ಕಾರ್ಖಾನೆಗೆ ಚಾಲನೆ ನೀಡಲಿದ್ದು, 2024-25ನೇ ನೇ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಮೈ ಶುಗರ್ ಕಾರ್ಖಾನೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮೈಶುಗರ್ ಕಾರ್ಯಾರಂಭದಿಂದ ಮಂಡ್ಯದ ರೈತರು ಹಾಗೂ ಕಬ್ಬು ಬೆಳೆಗಾರರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಈಗಾಗಲೇ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ,ಕಾರ್ಖಾನೆಗೆ 1.90 ಲಕ್ಷ ಮೆಟ್ರಿಕ್ ಟನ್ ಗೆ ಒಪ್ಪಿಗೆ ಸೂಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 2.50ಲಕ್ಷ ಮೆಟ್ರಿಕ್ ಟನ್ ಕಬ್ಬುನುರಿಸುವ ಗುರಿ ಹೊಂದಿದೆ.