ಮಂಡ್ಯ: ಇಂದು ಸರ್.ಎಂ.ವಿಶ್ವೇಶ್ವರಯ್ಯ ಹುಟ್ಟುಹಬ್ಬ ಹಿನ್ನಲೆ ಮಂಡ್ಯದ ಡಿಸಿ ಕಚೇರಿ ಎದುರಿನ ಕಾವೇರಿ ವನದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಸಚಿವ ಎನ್.ಚಲುವರಾಯಸ್ವಾಮಿ ಮಾಲಾರ್ಪಣೆ ಮಾಡಿದರು.
ಮಾಲಾರ್ಪಣೆ ಮಾಡಿದ ನಂತರ ಸಚಿವರು ಸರ್.ಎಂ.ವಿಶ್ವೇಶ್ವರಯ್ಯ ಅವರನ್ನ ನೆನೆದರು. ಬಳಿಕ ನಾಡಿನ ಜನತೆ ಹಾಗೂ ಕಾವೇರಿಯ ರೈತರಿಗೆ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ತಮಿಳುನಾಡಿಗೆ ನೀರು ನಿಲ್ಲಿಸಲು ಮನವಿ ಮಾಡಿದ್ದೆ. ನೀರು ನಿಲ್ಲಿಸಿದ್ದಾರೆ ಎಂದು ಸಚಿವರಿಗೆ ಧನ್ಯವಾದ ತಿಳಿಸಿದರು.
ಮೈಶುಗರ್ ಕಾರ್ಖಾನೆಗೆ 10 ಕೋಟಿ ಕೇಳಲಾಗುತ್ತು. ಸಿಎಂ 50 ಕೋಟಿ ಕೊಟ್ಟಿದ್ದರು. 1 ಲಕ್ಷ ಟನ್ ಕಬ್ಬು ಅರೆದು ಪೇಮೆಂಟ್ ಆಗಿದೆ. ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ತೊಂದರೆ ಕೊಡುತ್ತೆ. ಮತ್ತೆ 50 ಕೋಟಿಯನ್ನು ಸರ್ಕಾರ ಕಾರ್ಖಾನೆಗೆ ಕೊಟ್ಟಿದೆ ಎಂದು ಹೇಳಿದರು.
ಮಂಡ್ಯ ಕ್ಷೇತ್ರವನ್ನ ಬರ ಪೀಡಿತ ಪ್ರದೇಶ ಘೋಷಣೆ ಯಾಮಾಡಲಾಗಿದೆ. ಹೊಸ ಸಕ್ಕರೆ ಕಾರ್ಖಾನೆಗೆ ಜಾಗ ನೋಡಲಾಗುತ್ತಿದೆ. ಶೀಘ್ರದಲ್ಲೇ ಹೊಸಕಾರ್ಖಾನಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಕ್ಯಾನ್ಸರ್ ಆಸ್ಪತ್ರೆಗೆ 18 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಇದೇ ವೇಳೆ ಸೇರಿ ಅಧಿಕಾರಿ ವರ್ಗ ಭಾಗಿಯಾಗಿದ್ದರು.