ಮಂಡ್ಯ: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮಂಡ್ಯ ಮುಡಾ ಅಧ್ಯಕ್ಷ-ಸದಸ್ಯರನ್ನು ರಾಜ್ಯ ಸರ್ಕಾರ ನೇಮಿಸಿದೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ನಹೀಮ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಸದಸ್ಯರಾಗಿ ಎನ್.ದೊಡ್ಡಯ್ಯ, ಡಿ.ಕೇಶವ, ಅರುಣ್‌ಕುಮಾರ್, ಎಂ.ಕೃಷ್ಣ ನೇಮಕಗೊಂಡಿದ್ದಾರೆ.
ನಗರಸಭೆ ಸದಸ್ಯರಾಗಿದ್ದ ನಹೀಮ್ ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆಗೆ ಹರಿದು ಬರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ ಶಾಸಕ ಗಣಿಗ ರವಿಕುಮಾರ್ ಹಾಗೂ ಸಚಿವ ಚೆಲುವರಾಯ ಸ್ವಾಮಿ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ ಮೂಡ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬಿಜೆಪಿ ಸರ್ಕಾರದಿಂದ ಈ ಹಿಂದೆ ಕೆ ಶ್ರೀನಿವಾಸ್ ಅಧ್ಯಕ್ಷರಾಗಿದ್ದರು. ಇದೀಗ ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಹೀಮ್ ನೇಮಕ ಮಾಡಲಾಗಿದೆ.
