ಮಂಡ್ಯ: ಹೇಮಾವತಿ ವ್ಯಾಪ್ತಿಯ ನಾಲೆಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರ ಜಮೀನುಗಳಿಗೆ ನೀರು ಹೋಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಅಧಿಕಾರಿಗಳ ವಿರುದ್ಧ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ದೇವರಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತಃ ರೈತರೆ ನಾಲೆಯಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಸ್ವಚ್ಚಗೊಳಿಸಿ ಅಧಿಕಾರಿಗಳಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.

ಕಾಲುವೆ ಸ್ವಚ್ಚ ಮಾಡಲು ಕೋಟ್ಯಾಂತರ ರೂಪಾಯಿ ಬಿಲ್‌ನ್ನು ಅಧಿಕಾರಿಗಳು ಹಾಕುತ್ತಿದ್ದು, ಆ ಬಿಲ್ ಪುಸ್ತಕದಲ್ಲಿ ಮಾತ್ರ ಇರುತ್ತೆ, ಆದರೆ ಕಾಲುವೆಗಳು ಮಾತ್ರ ಸ್ವಚ್ಚಗೊಳ್ಳೊದಿಲ್ಲ. ನಾಲೆಯಲ್ಲಿ ಗಿಡ-ಗಂಟೆಗಳು ಬೆಳೆದು ನಿಂತಿರುವುದೇ ಸಾಕ್ಷಿಯಾಗಿದೆ. ಅಧಿಕಾರಿಗಳ ಈ ಧೋರಣೆಯಿಂದ ರೈತರ ಜಮೀನಿಗೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹೇಳಿದರೆ ಯಾವುದೆ ಕ್ರಮ ಸಹ ವಹಿಸಿಲ್ಲ ಎಂದು ಇಂದು ಸ್ವತಃ ರೈತರೇ ನಾಲೆಯನ್ನು ಸ್ವಚ್ಛ ಮಾಡಿ ಈ ಮೂಲಕ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.
ಗಿರೀಶ್, ದೇವರಹಳ್ಳಿ ಗ್ರಾಮಸ್ಥ