ಮಂಡ್ಯ: ವಿಸಿ ನಾಲೆಯಲ್ಲಿ ಆಡುತ್ತಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಮಂಡ್ಯದ ಹೊಂಗಳ್ಳಿ ಮಠ ಗ್ರಾಮದ ವಿಸಿ ನಾಲೆಯಲ್ಲಿ ನಡೆದಿದೆ.
ಗ್ರಾಮದ ರಾಜು ಎಂಬುವವರ 04 ವರ್ಷದ ಮಗ ನೀರು ಪಾಲಾಗಿದ್ದಾನೆ. ನಿನ್ನೆಯಿಂದ ವಿಸಿ ನಾಲೆಗೆ ನೀರು ಹರಿಸಲಾಗಿತ್ತು. ನೀರು ಇಲ್ಲವೆಂದು ನಾಲೆಯಲ್ಲಿ ಇಂದು ಆಟವಾಡುತ್ತಿದ್ದ ಬಾಲಕ ಏಕಾ ಏಕಿ ನೀರು ಆಗಮಿಸಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ .ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.