ಮಂಡ್ಯ: ಜಿಲ್ಲೆಯಲ್ಲಿ ಕಬ್ಬು ಕಡಿಯಲು ಕಾರ್ಮಿಕರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 87ನೇ ಕಸಾಪ ಸಮ್ಮೇಳನದ ಹೆಸರಲ್ಲಿ ಕಬ್ಬು ಕಡಿಯುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಬೆಳೆದು ನಿಂತ ಕಬ್ಬು ಕಟಾವಿಗೆ ಜಿಲ್ಲಾಡಳಿತ ಪ್ಲಾನ್ ಮಾಡಿದ್ದು, ಮದ್ದೂರಿನ ಕಾರ್ಕಳ್ಳಿಯಲ್ಲಿ ಮೊದಲ ಬಾರಿಗೆ ಕಬ್ಬು ಕಡಿಯುವ ಸ್ಪರ್ಧೆ ಆಯೋಜಿಸಿ, ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ‘ಬಾ ಗುರು ಕಬ್ಬು ಕಡಿ’ ಹೆಸರಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡಕ್ಕೆ ಕೂಲಿಯ ಜೊತೆಗೆ ಬಹುಮಾನವು ಸಹ ನೀಡಲಾಗುತ್ತದೆ. ಕಬ್ಬು ಕಡಿಯುವ ಸ್ಪರ್ಧೆಯಲ್ಲಿ ಯುವಕರಿದ್ದ ಎಂಟು ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಿಗದಿತ ನಿಮಿಷದಲ್ಲಿ ಹೆಚ್ಚು ಕಬ್ಬು ಕಡಿದ ತಂಡಕ್ಕೆ ಕೂಲಿಯ ಜೊತೆಗೆ ಬಹುಮಾನ ವಿತರಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಿಗೂ ಕಡಿದ ಕಬ್ಬಿಗೆ ಕೂಲಿ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಬೆಳೆದು ನಿಂತ ಕಬ್ಬಿಗೆ ಸ್ಪರ್ಧೆ ಆಯೋಜನೆ ಮಾಡುವ ಮುನ್ನ ಪೂಜೆ ಸಲ್ಲಿಸಿ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸ್ಪರ್ದಾಳುಗಳಿಗೆ ‘ಎಲಾ ಕುನ್ನಿ’ ಚಿತ್ರ ತಂಡದ ನಟ ನಟಿಯರು ಹಾಗೂ ಪ್ರೇಕ್ಷಕರು ಉರಿ ತುಂಬಿಸಿದರು. ಕಾರ್ಕಳ್ಳಿ ಗ್ರಾಮದ ಮಹದೇವು ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಸ್ಪರ್ಧೆ ಆರಂಭಿಸಲಾಗಿತ್ತು.