ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಪಡಿತರ ಅಕ್ಕಿ ಪಡೆಯಲು ಬೆಳ್ಳಂಬೆಳಿಗ್ಗೆ ಜನರು ಸಾಲುಗಟ್ಟಿ ನಿಂತಿದ್ದು, ಅಂಗಡಿ ಮುಂದೆ ಜನಜಾತ್ರೆ ಉಂಟಾಗಿದೆ.
ನಾ ಮುಂದು ತಾ ಮುಂದು ಎಂಬಂತೆ ಸಾಲು ನಿಂತು ಜೊತೆಗೆ ಅಕ್ಕಿ ಪಡೆಯುವ ಚೀಲವನ್ನು ಸಾಲು ಮಾಡಿಟ್ಟಿದ್ದಾರೆ.
ಇಂದು ಪಡಿತರ ವಿತರಣೆಗೆ ದಿನಾಂಕ ನಿಗದಿ ಹಿನ್ನಲೆ ಗ್ರಾಮದ ನೂರಾರು ಜನರು ಅಕ್ಕಿಗಾಗಿ ಚೀಲದ ಜೊತೆ ಕ್ಯೂ ನಿಂತಿದ್ದಾರೆ.
ಸರ್ವರ್ ಡೌನ್ ಸಮಸ್ಯೆಯಿಂದ ಕಳೆದ 10 ದಿನದಿಂದಲೂ ಹೆಬ್ಬಟ್ಟು ಕಾರ್ಯ ನಡೆದಿದ್ದು, ಇದೀಗ ಥಂಬ್ ಕಾರ್ಯ ಮುಗಿದ ಹಿನ್ನಲೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಪಡಿತರ ಅಕ್ಕಿ ಪಡೆಯಲು ಒಂದೇ ದಿನ ನೂರಾರು ಜನರು ಜಮಾಯಿಸಿದ್ದಾರೆ.
ಬಡ ಕುಟುಂಬಗಳ ಹಸಿವು ನೀಗಿಸಲು ರಾಜ್ಯ ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತಿದ್ದು, ತಿಂಗಳ ಕೊನೆಯಲ್ಲಿ ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಣೆ ಮಾಡುತ್ತಿದ್ದು, ಹೆಬ್ಬೆಟ್ಟು ಪಡೆಯದೆ ನ್ಯಾಯಬೆಲೆ ಅಂಗಡಿಯವರು ಡ್ರಾಮಾ ಮಾಡ್ತಿದ್ದಾರೆ.ಜನರಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಇದೆಲ್ಲಾ ಕಂಡರು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದಾರೆ.