ಮಂಡ್ಯ: ಮತ್ತೆ ತಮಿಳುನಾಡಿಗೆ ನೀರು ಹರಿಸಲು CWMA ಆದೇಶ ಹಿನ್ನಲೆ ಪ್ರಾಧಿಕಾರದ ವಿರುದ್ದ ಕನ್ನಡಸೇನೆ, ರೈತಹಿತರಕ್ಷಣಾ ವೇದಿಕೆ ವಿನೂತನ ಪ್ರತಿಭಟನೆ ನಡೆಸಲಾಗಿದೆ.
ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಳೆ ಮೈ-ಬೆಂ ಹೆದ್ದಾರಿ ತಡೆದು ರಸ್ತೆಯಲ್ಲಿಯೆ ಕುಳಿತು, ಪಿತೃ ಪಕ್ಷದ ಹಬ್ಬಕ್ಕಾಗಿ ಮಾಡಿದ್ದ ಚಕ್ಕಲಿ, ನಿಪ್ಪಟ್ಟು, ಕಜ್ಜಾಯ ತಿಂದು ಹೋರಾಟ ಮಾಡಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿತೃ ಪಕ್ಷವನ್ನು ಮಾಡದಂತೆ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಸತ್ತ ಹಿರಿಯರು ಗಾಳಿ ಮೂಲಕ ಬಂದು ನಮಗೆ ನ್ಯಾಯ ದೊರಕಿಸಲಿ. ಕರ್ನಾಟಕದ ಪರ ಕಾವೇರಿ ತೀರ್ಪು ಬರಲಿ ಎಂದು ವಿಭಿನ್ನ ಚಳವಳಿ ನಡೆಸಲಾಗಿದೆ.
ರಸ್ತೆ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.