ಮಂಡ್ಯ: ಮೈಸೂರು ಕಡೆಯಿಂದ ಬೆಂಗಳೂರು ಕಸಾಯಿಖಾನೆಗೆ ಈಚರ್ ವಾಹನದಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ತಂಡ ರಕ್ಷಣೆ ಮಾಡಿದೆ. ಇಂದು ಬೆಳಗ್ಗಿನ ಜಾವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ಅಂಬೇಡ್ಕರ್ ಭವನದ ಬಳಿ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ನಂತರ ಪುನೀತ್ ಕೆರೆಹಳ್ಳಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೋವುಗಳಿದ್ದ ಕ್ಯಾಂಟರ್ ಹಿಡಿದು ಪುನೀತ್ ಕೆರೆಹಳ್ಳಿ ತಂಡ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಅನ್ವಯ ವಾಹನದ ಚಾಲಕ ಮನ್ಸೂರು ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.