ಮಂಡ್ಯ: ಮೈ ನವಿರೇಳಿಸುವ ಗ್ರಾಮೀಣ ಸೊಗಡಿನ ಎತ್ತುಗಾಡಿ ಓಟದ ಸ್ಪರ್ಧೆ ಯನ್ನು ಮಂಡ್ಯದ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದು ,ರಾಜ್ಯದ ವಿವಿಧ ಜಿಲ್ಲೆಗಳ 70 ಜೋಡಿ ಎತ್ತುಗಳು ಗಾಡಿ ಓಟದ ಸ್ಪರ್ಧಿಯಲ್ಲಿ ಭಾಗವಹಿಸಿದ್ದವು .
ಎತ್ತಿನ ಗಾಡಿ ಓಟ ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿದ್ದು, ಗ್ರಾಮದ ಕಾಲಭೈರವೇಶ್ವರ ಯುವಕರ ಸಂಘದಿಂದ ಎತ್ತು ಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡೆ ನೋಡಿ ಜನರು ಸಂಭ್ರಮಿಸುತ್ತಿದ್ದಾರೆ.