ಮಂಡ್ಯ: ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಮತ್ತೆ ಜಾನುವಾರುಗಳು ಸರಣಿಯಾಗಿ ಸಾವನ್ನಪ್ಪುತ್ತಿದ್ದು, ಐದು ವರ್ಷದಲ್ಲಿ ಒಂದೇ ಕುಟುಂಬದ 32 ರಾಸುಗಳು ಬಲಿಯಾಗಿವೆ.
ಕೀಲಾರ ಗ್ರಾಮದ ರೈತ ಶಂಕರೇಗೌಡ ಕುಟುಂಬದಲ್ಲಿ ಜಾನುವಾರುಗಳ ಸಾವಿನ ಪ್ರಕರಣ ಮತ್ತೆ ಮರುಕಳಿಸಿದ್ದು, ಜಾನುವಾರುಗಳ ನಿಗೂಢ ಸಾವಿನ ಬಗ್ಗೆ ಪಶುವೈದ್ಯರು ಹಾಗೂ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿದೆ. ರಾಸುಗಳ ದೇಹದಲ್ಲಿ ಅಮೋನಿಯಂ ಟಾಕ್ಸಿಟಿ ಎನ್ನುವ ಅಂಶ ಪತ್ತೆಯಾಗಿದ್ದು, ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್ ಗಳನ್ನು ವಿದೇಶಕ್ಕೆ ಕಳುಹಿಸಲಾಗಿದೆ.

ದೇವರ ಮೊರೆ ಹೋದರು ರೈತ ಕುಟುಂಬಕ್ಕೆ ಪರಿಹಾರ ದೊರೆತಿಲ್ಲ. ರೈತ ಕುಟುಂದ ಹೋಮ-ಹವನ ಮಾಡಿಸಿ ಮನೆ ಮುಂದೆ ದೇವರ ತ್ರಿಶೂಲ ನೆಟ್ಟಿದ್ದಾರೆ.
ರೈತ ಕುಟುಂಬಕ್ಕೆ ರಾಸುಗಳ ಸರಣಿ ಸಾವಿನಿಂದ ಲಕ್ಷಾಂತರ ರೂ. ನಷ್ಟವಾಗಿದ್ದು, ಉಳುಮೆ ಮಾಡುವ ಎತ್ತುಗಳನ್ನು ಕಳೆದುಕೊಂಡು ಜಮೀನನ್ನು ಪಾಳು ಬಿಟ್ಟಿದ್ದಾರೆ,
ರಾಸುಗಳ ನಿಗೂಢ ಸಾವಿನಿಂದ ಸಾಕಷ್ಟು ನಷ್ಟ ಅನುಭವಿಸಿದ್ರು ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ನೆರವು ಸಿಕ್ಕಿಲ್ಲ. ಆದ್ದರಿಂದ ಆದಷ್ಟು ಶೀಘ್ರವಾಗಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ರೈತ ಕುಟುಂಬ ಮನವಿ ಮಾಡಿದೆ.
