ಮಂಡ್ಯ: ಕರ್ತವ್ಯ ಮುಗಿಸಿ ತಾಯಿ ನಾಡಿಗೆ ಮರಳಿದ ವೀರ ಯೋಧ ಸುಬೇದಾರ್ ಜಗತಾಪ್ ಎನ್.ಆರ್. ಮಂಡ್ಯದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ.
28 ವರ್ಷಗಳ ಸುದೀರ್ಘ ಕಾಲ ಕರ್ತವ್ಯ ಮುಗಿಸಿ ಜನ್ಮಸ್ಥಳಕ್ಕೆ ಮರಳಿದ ಸೈನಿಕನಿಗೆ ಜೀವಧಾರೆ ಟ್ರಸ್ಟ್ ಹಾಗೂ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಯೋಧನಿಗೆ ಪಾದ ಪುಷ್ಪಾರ್ಚಾನೆ ಸಲ್ಲಿಸಿ ಸ್ವಾಗತ ಕೋರಿದ್ದು, ಬೈಕ್ ರ್ಯಾಲಿ ಮೂಲಕ ವೀರಯೋದನ ಮೆರವಣಿಗೆ ಮಾಡಲಾಗಿದೆ.
ಬಳಿಕ ಮಂಡ್ಯದ ವಿದ್ಯನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ನಂತರ ಯೋಧನಿಗೆ ಜೀವಾಧಾರೆ ಟ್ರಸ್ಟ್ ನ ಅಧ್ಯಕ್ಷ ನಟರಾಜ್ ಪಾದಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ನಮ್ಮ ದೇಶ ಕಾಯುವ ಸೈನಿಕ ನಮ್ಮ ಹೆಮ್ಮೆ. ನಾವು ನಮ್ಮ ನಾಡಲ್ಲಿ ಸಂತೋಷದಿಂದ ಸ್ವತಂತ್ರವಾಗಿರಲು ಸೈನಿಕರು ಕಾರಣ. ಗಡಿಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮ ದೇಶ ಕಾಯುತ್ತಾರೆ. ಅವರು ಮತ್ತೆ ಮರಳಿ ನಮ್ಮ ನಾಡಿಗೆ ಬಂದಿರುವುದು ಸಂತೋಷ. ಅವರಿಗೆ ದೇವರು ಮತಷ್ಟು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದ್ದಾರೆ.