Wednesday, April 9, 2025
Google search engine

Homeಅಪರಾಧಮಂಡ್ಯ: ರೌಡಿಶೀಟರ್ ನನ್ನು ಹತ್ಯೆಗೈದ ಸ್ನೇಹಿತರು

ಮಂಡ್ಯ: ರೌಡಿಶೀಟರ್ ನನ್ನು ಹತ್ಯೆಗೈದ ಸ್ನೇಹಿತರು

ಮಂಡ್ಯ: ರೌಡಿಶೀಟರ್ ನನ್ನು ಸ್ನೇಹಿತರೇ ಕತ್ತು ಕತ್ತರಿಸಿ ಕೊಲೆ ಮಾಡಿರುವಂತಹ ಭೀಕರ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆಯ ಕೆಆರ್​ಎಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿ ಶೀಟರ್ ಸುಧೀರ್ (35) ಹತ್ಯೆಯಾದವ.

ರೌಡಿ ಶೀಟರ್ ಸುಧೀರ್ ಹಾಗೂ ಸ್ನೇಹಿತರೊಂದಿಗೆ ಇಂದು ಎಣ್ಣೆ ಪಾರ್ಟಿ ಮಾಡಿದ್ದಾರೆ. ಸ್ನೇಹಿತ ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರು ಪಾರ್ಟಿ ಮಾಡುವ ಸಂದರ್ಭದಲ್ಲಿ ಗಲಾಟೆ ಶುರುವಾಗಿದೆ. ಪಾರ್ಟಿಯ ಮಧ್ಯೆ ಹೊತ್ತಿಕೊಂಡಂತ ಜಗಳ ತಾರಕಕ್ಕೇರಿದೆ. ಇದರಿಂದಾಗಿ ಪಾರ್ಟಿಯಿಂದ ಅರ್ಧಕ್ಕೆ ಹುಲಿಕೆರೆಯ ರಸ್ತೆ ಬಳಿಗೆ ರೌಡಿ ಶೀಟರ್ ಸುಧೀರ್ ಎದ್ದು ಬಂದಿದ್ದಾನೆ. ಆದರೆ ಆತನನ್ನು ಹಿಂಬಾಲಿಸಿಕೊಂಡು ಬಂದಂತಹ ಪೂರ್ಣಚಂದ್ರ ಹಾಗೂ ಸ್ನೇಹಿತರು ಸುಧೀರ್ ಕುತ್ತಿಗೆ ಕತ್ತರಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಕೆಆರ್​ ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕೊಲೆಯಾದ ರೌಡಿ ಶೀಟರ್ ಸುಧೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

RELATED ARTICLES
- Advertisment -
Google search engine

Most Popular