ಮಂಡ್ಯ: ಕೊಟ್ಟಿಗೆಯಲ್ಲಿ ಕಟ್ಟಿದ್ದೆ ಕರುವನ್ನು ಚಿರತೆ ಹೊತ್ತೊಯ್ದು ತಿಂದಿರುವ ಘಟನೆ ಮದ್ದೂರು ತಾಲ್ಲೂಕಿನ ಮಾದಾಪುರದೊಡ್ಡಿ ಗ್ರಾಮದಲ್ಲಿ ತಡರಾತ್ರಿ ನಡೆಸಿದೆ.
ತಡರಾತ್ರಿ ಗ್ರಾಮದ ಅಭಿ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಚಿರತೆ ಎಳೆದೊಯ್ದು ಅರ್ಧ ಭಾಗ ತಿಂದಿದೆ.
ಕರುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.
ಚಿರತೆ ಪ್ರತ್ಯಕ್ಷದಿಂದ ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.