ಪಿಡಿಒ ಶಶಿಧರ್ ವಿರುದ್ಧ ತನಿಖೆಗೆ ಮುಂದಾದ ಜಿಲ್ಲಾಡಳಿತ
ಮಂಡ್ಯ: ಸೆಲೆಬ್ರಿಟಿಗಳನ್ನೂ ನಾಚಿಸುವಂತಿದೆ ಪಿಡಿಓ ದುನಿಯಾ!. ಯಾವ ನಟ, ರಾಜಕಾರಣಿ, ರೌಡಿಗಳಿಗೂ ಕಮ್ಮಿ ಇಲ್ಲ ಮಂಡ್ಯ ಪಿಡಿಓ ಇಟ್ಟಿರೋ ಹವಾ. ಸಸ್ಪೆಂಡ್ ಆಗಿದ್ದವನದ್ದು ಸೆಲೆಬ್ರೆಟಿಯಂತೆ ಫೋಸು…!
ಎಲ್ಲರನ್ನ ಉಬ್ಬೇರಿಸುವಂತಿದೆ ಮಂಡ್ಯದ ಪಿಡಿಓ ಒಬ್ಬನ ಐಷಾರಾಮಿ ಲೈಫು. ಕೈಯಲ್ಲಿ ದೊಡ್ಡ ಕಬ್ಬಿಣದ ರಾಡು, ಮುಖ, ಮೈ, ಕೈ ಮೇಲೆಲ್ಲ ಬ್ಲಡ್… ಜಿಮ್ ನಲ್ಲಿ ಸುಂದರಿ ಜೊತೆ ಬಾಡಿ ಬಿಲ್ಡ್, ಸಿಕ್ಸ್ ಪ್ಯಾಕ್ ಶೋ ಅಪ್.
ಸುತ್ತಲೂ ಬಾಡಿ ಬಿಲ್ಡರ್ಸ್, ಬೌನ್ಸರ್ಸ್ ಕಟ್ಕೊಂಡ್ ಓಡಾಡೋದೆ ಇವನ ಕ್ರೇಜ್. ತಾನು ಖರೀದಿಸಿದ ದುಬಾರಿ ಹೊಸ ಇನ್ನೋವಾ ಕಾರು ಸ್ವೀಕರಿಸೋದ್ರಲ್ಲೂ ಈತ ಎಲ್ಲರಿಗಿಂತ ಡಿಫರೆಂಟ್. ರಾಜಕಾರಣಿಗಳಿಗೆ ಈತ ಕೊಡೋದು ಬೆಳ್ಳಿ ಕಿರೀಟದಂತಹ ದುಬಾರಿ ಗಿಫ್ಟ್. ಪತ್ನಿ ಜೊತೆಗೆ ಸೇರಿ ಬಾಡಿಗಾರ್ಡ್ ಸಮೇತ ಆಗಮಿಸಿ ಕಾರು ಖರೀದಿಸಿ, ಕಾರು ಖರೀದಿ ಬಳಿಕ ಪೂಜೆ ಸಲ್ಲಿಸಿ ಪತ್ನಿಯಿಂದಲೂ ಪೂಜೆ ಸಲ್ಲಿಸಿರೊ ಪಿಡಿಓ..

ಇದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆತಗೂರು ಪಿಡಿಓನ ಬಿಂದಾಸ್ ದುನಿಯಾದ ಕಹಾನಿ ……..
2018 ರಲ್ಲಿ ಶಶಿಧರ್ ಸರ್ಕಾರಿ ಕೆಲಸಕ್ಕೆ ಸೇರಿದ್ದರು. ಇವನ ಆದಾಯ ಅಥವಾ ಹಣದ ಮೂಲವೇ ಸೀಕ್ರೆಟ್!.
ಆತಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಶಶಿಧರ್ @ ಶಶಿಗೌಡ. ಅಕ್ರಮ, ಭ್ರಷ್ಟಾಚಾರ ಆರೋಪದಡಿ ಈ ಹಿಂದೆ ಅಮಾನತ್ತಾಗಿದ್ದರು. ಈ ಹಿಂದೆ ಹಲಗೂರು ಗ್ರಾಪಂನಲ್ಲಿ ಸುಮಾರು 1 ಕೋಟಿಯಷ್ಟು ಅಕ್ರಮ ಅವ್ಯವಹಾರ ಆರೋಪ ಕೇಳಿ ಬಂದಿತ್ತು.
ನೆಲಮಾಕನಹಳ್ಳಿ ಗ್ರಾಪಂನಲ್ಲೂ ಭ್ರಷ್ಟಾಚಾರ ನಡೆಸಿ ಶಶಿ ಅಮಾನತ್ತಾಗಿದ್ದರು. ಇದೀಗ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅತಗೂರು ಗ್ರಾಪಂ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮ ಅವ್ಯವಹಾರ ಆರೋಪ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಕಾರು ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶಶಿಧರ್ ಅಪ್ ಲೋಡ್ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ದು ಸಿನಿಮಾ ಶೂಟಿಂಗ್ ಮಾಡ್ತಿರೊ ಶಶಿಧರ್. ಬಿಲ್ಡರ್ ಎಂಬ ಹೆಸರಿನಲ್ಲಿ ತಾವೇ ಹೀರೊ ತಮ್ಮ ಪತ್ನಿಯೇ ಹೀರೊಯಿನ್ ಆಗಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ ಆದರೆ ಈಗ ಕಾರು ಖರೀದಿ ಮಾಡಿ ಸಿನಿಮಾ ಶೂಟಿಂಗ್ ಗಾಗಿ ಎಂಬಂತೆ ಶಶಿಧರ್ ನಡೆದುಕೊಂಡ್ರ ಎನ್ನುವ ಅನುಮಾನವೊಂದು ಮೂಡಿದೆ .ಇದರಿಂದ ಜಿಲ್ಲಾಡಳಿತ ಪಿಡಿಒ ಶಶಿಧರ್ ವಿರುದ್ಧ ತನಿಖೆಗೆ ಮುಂದಾಗಿರುವುದು ತಿಳಿದು ಬಂದಿದೆ.
ಇದೀಗ ಪಿಡಿಓ ವಿಡಿಯೋ ಚಿತ್ರೀಕರಣದ ವಿಡಿಯೋ ಪ್ರಕರಣ ವೈರಲ್ ಆದ ಹಿನ್ನೆಲೆಯಲ್ಲಿ ಸಿಇಓ ಶೇಖ್ ತನ್ವೀರ್ ಆಸಿಫ್ ಮಂಡ್ಯದಲ್ಲಿ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿಇಓ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಂಟರ್ಟೈನ್ಮೆಂಟ್ ಹಾಗೂ ಸಿನಿಮ್ಯಾಟಿಕ್ ರೀತಿ ತೆಗೆಸಲಾಗಿದೆ. ಕರ್ನಾಟಕ ಸರ್ವೀಸ್ ರೂಲ್ ಪ್ರಕಾರ ಯಾವುದೇ ಎಂಟರ್ಟೈನ್ಮೆಂಟ್ ಪರ್ಪಸಸ್ ಗೆ ಮಾಡಿದರು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಈ ಪ್ರಕರಣ ಸಿನಿಮೀಯ ರೀತಿ ಕಾಣ್ತಿದೆ ತನಿಖೆ ಮಾಡ್ತೇನೆ. ತಂಡ ರಚನೆ ಮಾಡಿ ತನಿಖೆ ನಡೆಸಿ ನೋಟಿಸ್ ಜಾರಿ ಮಾಡುತ್ತೇವೆ ಎಂದರು.
ಯಾವ ನೋಂದಣಿಯಾಗಿದೆ ನೋಡಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅವರು ಸಿನಿಮಾ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ತನಿಖೆ ಬಳಿಕ ಸತ್ಯಸತ್ಯತೆ ಹೊರ ಬರುತ್ತೆ. ಇಲಾಖೆ ಗಮನಕ್ಕೆ ಇವಾಗ ಬಂದಿದೆ. ಮಳವಳ್ಳಿಯಲ್ಲಿ ಇದ್ದ ಸಂದರ್ಭದಲ್ಲಿ ಒಂದು ಪ್ರಕರಣದ ಅಮಾನತು ಹಾಗಿ. ಮತ್ತೆ ಹಲಗೂರಿನಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ಕೂಡ ಆ ಎಲ್ಲಾ ಪ್ರಕರಣ ತನಿಖೆ ನಡೆಯುತ್ತಿದೆ. ಈ ವಿಚಾರವಾಗಿ ತಂಡ ರಚನೆ ಮಾಡಿ ತನಿಖೆ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಿನಿಮಾ ಚಿತ್ರೀಕರಣಕ್ಕಾದರು ಲಾಭ ಇದ್ರೆ ಸರ್ಕಾರದ ಅನುಮೋದನೆ ತೆಗೆದುಕೊಳ್ಳಬೇಕು. ಕೆಲಸದ ಸಮಯದಲ್ಲಿ ಒಳ್ಳೆಯ ಉದ್ದೇಶಕ್ಕು ಮಾಡುವ ಅವಕಾಶ ಇಲ್ಲ. ಈ ವಿಷಯದಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.