ಮಂಡ್ಯ: ಜಿಲ್ಲೆಯಲ್ಲಿ ದಾಖಲೆ ಇಲ್ಲದ 1 ಕೋಟಿ 4 ಲಕ್ಷ ನಗದು, ಹಾಗೂ 37 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಜಪ್ತಿ ಮಾಡಿದ ಮದ್ಯ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 71 ಲಕ್ಷದ 77,836 ರೂ ಮೌಲ್ಯದ ಒಟ್ಟು 36,569 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಿಂದ ಸುಮಾರು 193 ಪ್ರಕರಣ ದಾಖಲು, 10 ವಾಹನ, ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 1ಕೋಟಿ 4 ಲಕ್ಷದ 57,490 ರೂ ನಗದು ಸೀಜ್ ಮಾಡಲಾಗಿದೆ.
ಮಾ.18 ರಂದು ಮದ್ದೂರು ತಾಲ್ಲೂಕಿನ ನಿಡಘಟ್ಟ ಚೆಕ್ ಪೋಸ್ಟ್ ನಲ್ಲಿ 99ಲಕ್ಷದ 22 ಸಾವಿರ ವಶಪಡಿಸಿಕೊಳ್ಳಲಾಗಿದೆ.
ಹಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮಂಡ್ಯದ ಬಸರಾಳು, ನಾಗಮಂಗಲದಲ್ಲಿ ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಗಾಂಜಾ ಪ್ರಕರಣ 64 ಸಾವಿರ ಮೌಲ್ಯದ 1KG 829 ಗ್ರಾಂ ಅಮಾನತುಮಾಡಿಕೊಳ್ಳಲಾಗಿದೆ.
ಮಾ.17 ರಿಂದ ಮಾ.25 ರ ವರಗೆ ಜಪ್ತಿ ಮಾಡಿದ ನಗದು ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ.