ಮಂಡ್ಯ: ಕೇಂದ್ರ ಸಚಿವ ಎಚ್ ಡಿ ಕೆ ಗೆ ಪಾಂಡವಪುರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಪಾಂಡವಪುರ ಪಟ್ಟಣದ ಮಂಡ್ಯ ವೃತ್ತದಲ್ಲಿ ಕಾರ್ಯಕರ್ತರು ಸ್ವಾಗತಿಸಿದರು .
ತೆರೆದ ವಾಹನದಲ್ಲಿ ಜಾನಪದ ಕಲಾತಂಡಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ಸಮಾರಂಭದ ವೇದಿಕೆವರೆಗೂ ಎಚ್ಡಿಕೆಗೆ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಸಂದರ್ಭದಲ್ಲಿ ಮತದಾರರಿಗೆ ಕೈಮುಗಿದು ಕೈಬೀಸಿ ಕೃತಜ್ಞತೆ ಸಲ್ಲಿಸಿದರು.
ಎಚ್ಡಿಕೆ ನೋಡಲು ಮೆರವಣಿಗೆಯಲ್ಲಿ ಯುವ ಸಮೂಹ ಹಾಗೂ ಪಕ್ಷದ ಕಾರ್ಯಕರ್ತರು ಮುಗಿಬಿದ್ದರು. ತೆರೆದ ವಾಹನದಲ್ಲಿ ಎಚ್ಡಿಕೆಗೆ ಶಾಸಕ ಜಿಟಿಡಿ, ಮಾಜಿ ಶಾಸಕ ಪುಟ್ಟರಾಜು, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರು ಗಳು ಸಾಥ್ ನೀಡಿದರು.