ಮಂಡ್ಯ: ಜಮೀನು ವಿಚಾರವಾಗಿ ಗಲಾಟೆ ನಡೆದ ಬಳಿಕ ವ್ಯಕ್ತಿ ರಾತ್ರಿ ಗ್ರಾಮಕ್ಕೆ ಬರುವಾಗ ಅಡ್ಡಗಟ್ಟಿ ಮೂವರು ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಸವೇಶ್ವರನಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರುದ್ರೇಶ್ ಹಲ್ಲೆಗೊಳಗಾದ ವ್ಯಕ್ತಿ.
ಹಲ್ಲೆಗೊಳಗಾದ ರುದ್ರೇಶ್ ಗೆ ಗಂಭೀರ ಗಾಯಗಳಾಗಿದ್ದು, ಬಿಬಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಮದ ಮಂಜುನಾಥ್, ಕೃಷ್ಣ, ವಿಜಯ್ ಕುಮಾರ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.