ಮಂಡ್ಯ: ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಕೈ ಮುಖಂಡರಿಗೆ ಮತದಾರರ ಎಚ್ಚರಿಕೆ ನೀಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಕೈ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿಯನ್ನು ಕೈ ಮುಖಂಡ ಕಿಕ್ಕೇರಿ ಸುರೇಶ್ ಹೀಯಾಳಿಸುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದ ಮತದಾರನೋರ್ವ ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಆಕ್ರೋಶ ಮತದಾರನನ್ನು ಸುಮ್ಮನಾಗಿಸಲು ಕೈ ಮುಖಂಡರು ಪ್ರಯತ್ನಿಸಿದ್ದು, ನೀವು ಮತ ಕೇಳಿ ಅದು ಬಿಟ್ಟು ಕುಮಾರಣ್ಣನನ್ನು ಹೀಯಾಳಿಸದಂತೆ ತಿಳಿದರು.
ಮತದಾರನ ಎಚ್ಚರಿಕೆ ಬಳಿಕ ಕೈ ಮುಖಂಡರು ಎಚ್ಚರಿಕೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಸೇರಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್, ಕೈ ಮುಖಂಡ ಬಿ.ಎಲ್.ದೇವರಾಜು ಭಾಗಿಯಾಗಿದ್ದರು.