ಮಂಡ್ಯ:ಕೇಂದ್ರೀಯ ಯೋಗ, ಪ್ರಕೃತಿ ಚಿಕಿತ್ಸಾ ಅನುಸಂಧಾನ ಪರಿಷತ್ ವತಿಯಿಂದ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶೀರಾಪಟ್ಟಣ ಗ್ರಾಮದ ಸಂಶೋಧನಾ ಸಂಸ್ಥೆ ಆವರಣದಲ್ಲಿ ಯೋಗ, ಪ್ರಕೃತಿ ಚಿಕಿತ್ಸೆ ಸಂಶೋಧನಾ ಸಂಸ್ಥೆಯನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಸಚಿವ ಚೆಲುವರಾಯಸ್ವಾಮಿ ಜೊತೆ ಸಂಸದೆ ಸುಮಲತಾ ಸಾಥ್ ನೀಡಿದರು. ರಾಜ್ಯ ಆಯುಷ್ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಡಾ.ಮುಂಜಪರ್ ಮಹೇಂದ್ರಬಾಯಿ ಕಲುಬಾಯಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಸಿ ಡಾ.ಕುಮಾರ್, ಎಸಿ ನಂದೀಶ್, ತಹಶೀಲ್ದಾರ್ ನಹೀಮುನ್ನಿಷಾ ಸೇರಿ ಹಲವರು ಭಾಗಿಯಾಗಿದ್ದರು.

ನಂತರ ಸಚಿವ ಎನ್ ಚೆಲುವರಾಯಸ್ವಾಮಿ ಮಾತನಾಡಿ ಜನಕ್ಕೆ ಅವಶ್ಯಕತೆ ಇರುವ ಯೋಜನೆ ಬಗ್ಗೆ ಅರ್ಥಮಾಡಿಕೊಳ್ಳಬೇಕು.ನಾನು ಆರೋಗ್ಯ ಸಚಿವರಾಗಿದ್ದಾಗ ಈ ಯೋಜನೆಗೆ ಕಾರಣ.ನಮ್ಮ ಆಹಾರ ಪದ್ದತಿಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಪ್ರಕೃತಿ ಚಿಕಿತ್ಸೆ ಪಡೆದುಕೊಂಡರೆ ನಮ್ಮ ಆಯುಷ್ ವೃದ್ದಿಯಾಗುತ್ತೆ. ಗಿಡಮೂಲಿಕೆಯ ಔಷಧೀಯ ಪಡೆಯಬೇಕು. ಯೋಗ ಮತ್ತ ಸನಾತನ ಸಂಸ್ಕೃತಿಯಿಂದ ಬಂದಿರುವ ಪದ್ದತಿ.ಗಿಡಮೂಲಿಕೆಯ ಔಷಧೀಯ ತಿಂದು ಬದುಕುತ್ತಿದ್ದರು.ನಾವು ಇಂದಿನ ಆಹಾರ ತಿಂದು ಆರೋಗ್ಯ ಆಳಾಗುತ್ತಿದೆ.
ಕೇಂದ್ರದಿಂದ ಈ ಯೋಜನೆ ಉಪಯೋಗವಾಗುತ್ತದೆ.ಈ ಭಾಗದ ಎಲ್ಲಾ ಜನರು ಇದನ್ನು ಉಪಯೋಗಿಸಿಕೊಳ್ಳಬೇಕು.ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಾಲಯ ಬಂದಿರುವುದು ಸಂತೋಷ.ಮುಂದಿನ ದಿನಗಳಲ್ಲಿ ಕಾಲೇಜು ಸ್ಥಾಪನೆ ಮಾಡ್ತೇವೆ.ಮಂಡ್ಯ ಜಿಲ್ಲೆಗೆ ಅವಶ್ಯಕತೆ ಇದೆ.200 ಬೆಡ್ ಗಳ ವ್ಯವಸ್ಥೆ ಇದೆ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಸಂಸದ ಸುಮಲತಾ ಅಂಬರೀಶ್ ಮಾತನಾಡಿ ಇಂದು ಯೋಗಕ್ಕೆ ವಿಶ್ವಗುರು ಅಂತ ಹೆಸರು ಗಳಿಸಿದ್ದೇವೆ.ಮೋದಿಯವರು ಯೋಗ ದಿನ ಆಚರಣೆಗೆ ಅವಕಾಶ ಕೊಟ್ಟಿದ್ದಾರೆ.ಯೋಗ ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನೋದು ತಿಳಿದಿದೆ.ಮಂಡ್ಯದಲ್ಲಿ ಇಂತಹ ಒಂದು ಯೋಗ ಕೇಂದ್ರ, ಚಿಕಿತ್ಸಾ ಕೇಂದ್ರ ಬಂದಿರುವುದು ಘನತೆ ತರುವ ವಿಚಾರ. 2004 ರಲ್ಲಿ ಈ ಯೋಜನೆಗೆ ಅವಕಾಶ ಸಿಕ್ಕಿದೆ. ಆವತ್ತಿನ ಕಾಲದಲ್ಲಿ ಸಕಾಲದಲ್ಲಿ ಆಗಿದ್ರೆ ಅಂಬರೀಶ್ ಅವರೇ ಉದ್ಘಾಟನೆ ಮಾಡ್ತಿದ್ರು.ಯಾವುದೇ ಸರ್ಕಾರ ಇದ್ರು ಬದಲಾವಣೆ ಆಗ್ತಿರುತ್ತೆ.ಯಾವ ಪಕ್ಷದವರು ಬಂದು ಉದ್ಘಾಟನೆ ಮಾಡಿದ್ರು ಅನ್ಕೊಬಾರದು.ಈ ಯೋಜನೆ ಕಾಂಗ್ರೆಸ್ ಸರ್ಕಾರ ಶುರುಮಾಡಿದ್ದು.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 6.50 ಕೋಟಿ ಕೊಟ್ಟು ಈ ಯೋಜನೆ ಕೊಟ್ಟಿದ್ದಾರೆ.ನರೇಂದ್ರ ಮೋದಿ ಅವರು 60 ಕೋಟಿ ಕೊಟ್ಟು ಉದ್ಘಾಟನೆ ಮಾಡಲು ಅವಕಾಶ ಕೊಟ್ಟಿದ್ದಾರೆ.
ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸುತ್ತೇನೆ.ಜನರು ಸದ್ಬಳಕೆ ಮಾಡಿಕೊಳ್ಳದಿದ್ದರೆ ಅರ್ಥ ಸಿಗಲ್ಲ.ಕೊವಿಡ್ ಸಂದರ್ಭದಲ್ಲಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ.ಹಿಂದಿನ ಕಾಲದಲ್ಲಿ ಎಲ್ಲಾ ರೋಗಕ್ಕು ಔಷಧ ಕಂಡುಹಿಡಿದಿದ್ರು ಸೈಡ್ ಎಫೆಕ್ಟ್ ಇರಲಿಲ್ಲ.ನಾವು ಯೋಗ ಮಾಡುವ ಮೂಲಕ ಪ್ರಕೃತಿ ಚಿಕಿತ್ಸೆ ಪಡೆಯಬೇಕು ಎಂದರು.