ಮಂಗಳೂರು (ದಕ್ಷಿಣ ಕನ್ನಡ): ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಕೊಳಕಿಲೋಡಿ ಎಂಬಲ್ಲಿ ನಡೆದಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಕೂಲಿ ಕಾರ್ಮಿಕ ಹೊನ್ನಪ್ಪ ಗೌಡ ( 64), ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲಿರುತ್ತಿದ್ದರು. ಕುಡಿಯಲು ಹಣ ಅಡಚಣೆ ಉಂಟಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ನೊಂದಿದ್ದರು. ಮನೆಯ ಸಮೀಪದಲ್ಲಿರುವ ಬಾದಾಮಿ ಮರಕ್ಕೆ ಲುಂಗಿಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.