ಮಂಗಳೂರು (ದಕ್ಷಿಣ ಕನ್ನಡ): ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ದುರ್ಗಾಪರಮೇಶ್ವರಿ ದೇವಿಯ ಧೂತನಾಗಿ ನವಗುಳಿಗ ದೈವಗಳಿರುವ ಏಕೈಕ ಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬರ್ಕಜೆ ಎಂಬಲ್ಲಿ 9 ನೇ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. ಇದೇ ವೇಳೆ ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ನಡೆಯಿತು. ಪ್ರತಿ ವರ್ಷದಂತೆ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ಗಗ್ಗರ ಸೇವೆ ನಡೆದ್ರೆ ಈ ಬಾರಿ ಮಾತ್ರ ಭಕ್ತರ ಹರಕೆ ಸೇವಾ ರೂಪದಲ್ಲಿ 18 ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು ವಿಶೇಷವಾಗಿತ್ತು. ಹೌದು.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎಂಬಂತೆ ೧೮ ಗುಳಿಗ ದೈವದ ಗಗ್ಗರ ಸೇವೆ ನಡೆದು, ನೆರೆದಿದ್ದ ದೈರಾಧಕರನ್ನು ರೋಮಾಂಚನಗೊಳಿಸಿತ್ತು.

ಅಲ್ಲದೇ ಶಿವಧೂತ ಗುಳಿಗ ದೈವಗಳ ಅಬ್ಬರ ಕೂಡಾ ಜೋರಾಗಿತ್ತು. ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಸೇವೆ ಜೊತೆಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬಂತಾಯ್ತು.
ಇನ್ನೂ, ಪ್ರತ್ಯೇಕವಾಗಿ ನಡೆದ 18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಮುಂಬೈ ಬೆಂಗಳೂರು ಸೇರಿದಂತೆ ಕರಾವಳಿಯ ಸಾವಿರಾರು ದೈವಾರಾಕರು ಸೇರಿದ್ದರು. ಗುಳಿಗ ದೈವಗಳ ಗಗ್ಗರ ಸೇವೆ ಕಣ್ತುಂಬಿಕೊಂಡರು. ಒಟ್ನಲ್ಲಿ, ದೈವಾರಾಧನೆ ಎಂಬುದು ಕರಾವಳಿ ಅಸ್ಮಿತೆ. ಜನರ ನಂಬಿಕೆ. ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ 18 ಗುಳಿಗ ದೈವದ ನರ್ತನ ಸೇವೆ ಕಂಡು ಭಕ್ತರು ಪುನೀತರಾದರು.
