Friday, April 11, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಆಳಸಮುದ್ರದಲ್ಲಿ ಕೋಸ್ಟ್‌ಗಾರ್ಡ್‌ ತಾಲೀಮು, ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ

ಮಂಗಳೂರು: ಆಳಸಮುದ್ರದಲ್ಲಿ ಕೋಸ್ಟ್‌ಗಾರ್ಡ್‌ ತಾಲೀಮು, ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ

ಮಂಗಳೂರು (ದಕ್ಷಿಣ ಕನ್ನಡ): ಸಮುದ್ರದ ಮಧ್ಯೆ ಹಡಗುಗಳಲ್ಲಿ ಸಂಭವಿಸುವ ಅನಾಹುತ, ಕಡಲ್ಗಳ್ಳರ ಪತ್ತೆ ಅಪಾಯಕ್ಕೆ ಸಿಲುಕುವ ಮೀನುಗಾರಿಕಾ ಬೋಟು ಹಾಗೂ ಮೀನುಗಾರರ ರಕ್ಷಣೆಯ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್)ಯಿಂದ ನಡೆಸಲಾಗುವ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ ನವಮಂಗಳೂರು ಬಂದರು ಬಳಿಯ ಅರಬಿ ಸಮುದ್ರದಲ್ಲಿ ನಡೆಯಿತು.

ಭಾರತೀಯ ಕೋಸ್ಟ್‌ಗಾರ್ಡ್‌ 49ನೆ ರೈಸಿಂಗ್ ಡೇ (ಸ್ಥಾಪನಾ ದಿನ)ಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್‌ನ ಕಸರತ್ತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಉಪಸ್ಥಿತರಿದ್ದರೆ, ಕೋಸ್ಟ್ ಗಾರ್ಡ್‌ ಸುಮಾರು 400 ಸಿಬ್ಬಂದಿ ಈ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್ ಸೇರಿದಂತೆ ಇತರ ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರನ್ನು ಹೊತ್ತ ಭಾರತೀಯ ಕೋಸ್ಟ್ ಗಾರ್ಡ್‌ನ ಮಂಗಳೂರು ಮೂಲದ ಹಡಗಾದ ವರಾಹ ನವ ಮಂಗಳೂರು ಬಂದರಿನಿಂದ ಹೊರಟು 20 ನಾಟಿಕಲ್ ಮೈಲ್ (1 ನಾಟಿಕಲ್ ಅಂದರೆ 1.8 ಕಿ.ಮೀ. ದೂರ) ದೂರದಲ್ಲಿ ಸಮುದ್ರ ನಡುವೆ ನಡೆದ ಕೋಸ್ಟ್‌ಗಾರ್ಡ್‌ನ ವೈವಿಧ್ಯಮಯ ಕಸರತ್ತಿನ ಅಣುಕು ಪ್ರದರ್ಶನ ವೀಕ್ಷಣೆಗೆ ವೇದಿಕೆ ಕಲ್ಪಿಸಿತು.

ಕಡಲ ಗಸ್ತು ಹಡಗು (ಆಫ್‌ಶೋರ್ ಪ್ಯಾಟ್ರೋಲ್ ವೆಸೆಲ್- ಒಪಿವಿ) ವರಾಹ ಸುತ್ತ ಇನ್ನೊಂದು ಕೊಚ್ಚಿ ಮೂಲದ ಇನ್ನೊಂದು ಕೋಸ್ಟ್ ಗಾರ್ಡ್ ಒಪಿವಿ ಹಡಗು ಕ್ಷಕ್ಷಮ್, ಮೂರು ವೇಗದ ಗಸ್ತು ಹಡಗು (ಎಫ್‌ಪಿವಿ- ಫಾಸ್ಟ್ ಪ್ಯಾಟ್ರೋಲ್ ವೆಸೆಲ್ ಗಳಾದ ಅಮಾರ್ತ್ಯ, ರಾಜ್‌ ದೂತ್ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್‌ಸೆಪ್ಪ‌ರ್ ಬೋಟುಗಳು ಹಾಗೂ ಚೇತಕ್ ಹೆಸರಿನ ಹೆಲಿಕಾಪ್ಟರ್ ಈ ಕಾರ್ಯಾರಣೆಯಲ್ಲಿ ಭಾಗವಹಿಸಿದ್ದವು.

RELATED ARTICLES
- Advertisment -
Google search engine

Most Popular