ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಸಿಟಿ ಬಸ್ ನ ಕಂಡಕ್ಟರ್ ಬಸ್ಸಿನ ಎದುರು ಬಾಗಿಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ ಹೋಗುವ ವೇಳೆ ನಂತೂರು ವೃತ್ತ ಬಳಿ ಈ ಘಟನೆ ನಡೆದಿದೆ. ಬಸ್ಸಿನ ಎದುರು ಬಾಗಿಲ ಬಳಿ ನಿಂತಿದ್ದ ಈರಯ್ಯ( 23) ಎಂಬುವವರು ಆಯತಪ್ಪಿ ಬಿದ್ದಿದ್ದಾರೆ.
ತಕ್ಷಣ ಹೀರಯ್ಯ ಅವರನ್ನು ಸಂಚಾರ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.