ಮಂಗಳೂರು (ದಕ್ಷಿಣ ಕನ್ನಡ): ಹೋಲಿ ಕ್ರಾಸ್ ಚರ್ಚ್ ಕೋರ್ಡೆಲ್ ಕುಲಶೇಖರ ಇದರ ವತಿಯಿಂದ ಕೋರ್ಡೆಲ್ ಖೇಲ್ ಮೇಲ್ ೨೦೨೫ ಫೆ. ೮ ಮತ್ತು ೯ ರಂದು ಮಂಗಳೂರಿನ ಕುಲಶೇಖರ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ಆವರಣದಲ್ಲಿ ನಡೆಯಲಿದೆ ಎಂದು ಚರ್ಚ್ ನ ಪ್ರಧಾನ ಧರ್ಮ ಗುರು ಫಾ. ಕ್ಲಿಫರ್ಡ್ ಫೆರ್ನಾಂಡೀಸ್ ಹೇಳಿದ್ದಾರೆ.
ಈ ಕುರಿತು ಚರ್ಚ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ಗೆ ೧೫೦ ವರ್ಷಗಳ ಸುಧೀರ್ಘ ಇತಿಹಾಸವಿದ್ದು ಜಾತಿ ಧರ್ಮ ಭೇದವಿಲ್ಲದೆ ಭಕ್ತರು ಸೌಹಾರ್ದತೆಯಿಂದ ಇಲ್ಲಿ ಭಾಗವಹಿಸುತ್ತಾರೆ. ಇಂತಹ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರದಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದು ಫೆ. ೮ ರಂದು ಸಂಜೆ ೪ ಗಂಟೆಯಿಂದ ರಾತ್ರಿ ೧೦ ಗಂಟೆಯ ವರೆಗೆ ಫೆ. ೯ ರಂದು ಮುಂಜಾನೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಕೋರ್ಡೆಲ್ ಖೇಲ್ ಮೇಲ್ ೨೦೨೫ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಂಟು ವಿವಿಧ ಸ್ಪರ್ಧೆ, ಫ್ಲಾಸ್ ಮೋಬ್, ಖ್ಯಾತ ಚಿತ್ರ ನಟರು ಭಾಗಿಯಾಗಿದ್ದಾರೆ. ಇನ್ನೂ ಖೇಲ್ ಮೇಲ್ ನಲ್ಲಿ ೨೦ ಕ್ಕೂ ಅಧಿಕ ಗೇಮ್ಸ್ ಸ್ಟಾಲ್ ೨೦ ಕ್ಕೂ ಅಧಿಕ ಆಹಾರ ಸ್ಟಾಲ್ಸ್ ಬರಲಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದವರು ಹೇಳಿದರು.
ಈ ವೇಳೆ ಫೈನಾನ್ಸ್ ಕಮಿಟಿ ಸದಸ್ಯ ರೋಯ್ ಕ್ಯಾಸ್ಟೆಲಿನೊ ಮಾತನಾಡಿ ಈ ಸಂಭ್ರಮವು ಸೌಹಾರ್ದತೆಯ ಕಾರ್ಯಕ್ರಮ ಆಗಿದ್ದು, ಕಾರ್ಯಕ್ರಮದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ವಿಶೇಷ ಆತಿಥ್ಯ ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸರ್ವ ಧರ್ಮದವರ ಸಹಕಾರ ಸಿಗಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ರೂಥ್ ಕ್ಯಾಸ್ಟೆಲಿನೊ, ಕಾರ್ಯದರ್ಶಿ ಅನೀಲ್ ಡೇಸಾ ಮತ್ತಿತರರು ಉಪಸ್ಥಿತರಿದ್ದರು.