Sunday, April 20, 2025
Google search engine

Homeರಾಜ್ಯಮಂಗಳೂರು: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಅಡ್ಯಾರು ಸಮೀಪದ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಲೈಫ್ ಲೈನ್ ಹೆಲ್ತ್ ಕೇರ್ ಫಲ್ನೀರ್ ಹಾಗೂ ಲೆ ಆಪ್ಟಿಕೋ ಅತ್ತಾವರ ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಶಿಬಿರಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೊಹ್ಸೀರ್ ಅಹ್ಮದ್ ಸಮನಿಗೆ, ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ, ಜಮಿಯತುಲ್ ಫಲಹ್ ಉಪಾಧ್ಯಕ್ಷ ಪರ್ವೇಜ್ ಅಲಿ, ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಡಾ ಇ ಕೆ ಸಿದ್ದೀಕ್, ಅಡ್ಯಾರ್ ಪಂಚಾಯತ್ ಅಧ್ಯಕ್ಷ ಯಾಸಿನ್ ಅಹ್ಮದ್, ಬಿ-ಹ್ಯೂಮನ್ ಬಹ್ರೈನ್ ಅಧ್ಯಕ್ಷ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಕಾರ್ಯಕ್ರಮದಲ್ಲಿ ರಾಜ್ಯಪ್ರಶಸ್ತಿ ವಿಜೇತ ಮೀಫ್ ಸಂಸ್ಥೆಯನ್ನು ಅಭಿನಂದಿಸಲಾಯಿತು.

ವೈದ್ಯಕೀಯ ಶಿಬಿರದಲ್ಲಿ ಸಾರ್ವಜನಿಕರು ವಿವಿಧ ನೇತ್ರ ತಜ್ಞರು, ದಂತ ವೈದ್ಯರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಮನೋವೈದ್ಯರು, ಸಾಮಾನ್ಯ ವೈದ್ಯಕೀಯ ತಜ್ಞರಿಂದ ವೈದ್ಯಕೀಯ ಉಪಯೋಗ ಪಡೆದುಕೊಂಡರು. ಅಲ್ಲದೆ ಆಪ್ಟಿಕಲ್ ಫ್ರೇಮ್, ಮಧುಮೇಹ ತಪಾಸಣೆ, ಬಿಪಿ. , ಇ ಸಿ ಜಿ, ಶ್ವಾಸಕೋಶ  ಪರೀಕ್ಷೆ ಮೊದಲಾದ ಸವಲತ್ತುಗಳನ್ನು ಉಚಿತವಾಗಿ ಪಡೆದುಕೊಂಡರು.

RELATED ARTICLES
- Advertisment -
Google search engine

Most Popular