ಮಂಗಳೂರು (ದಕ್ಷಿಣ ಕನ್ನಡ): ರಾಷ್ಟ್ರೀಯ ಬೀದಿ ವ್ಯಾಪಾರ ದಿನಾಚರಣೆಯ ಅಂಗವಾಗಿ ಹಕ್ಕೊತ್ತಾಯ ಸಭೆಯು ಇಂದು ಮಂಗಳೂರು ನಗರದ ಕುದ್ಮುಲ್ ರಂಗ ರಾವ್ ಪುರಭವನದ ಹತ್ತಿರ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ನೇತೃತ್ವದಲ್ಲಿ ನಡೆಯಿತು. ಈ ಹಕ್ಕೊತ್ತಾಯ ಸಭೆಯಲ್ಲಿ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್, ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.