ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೊಟ್ಟಾರಚೌಕಿಯಲ್ಲಿ ರಿಕ್ಷಾ ತೋಡಿಗೆ ಬಿದ್ದು ದುರ್ಮರಣವನ್ನಪ್ಪಿದ ದೀಪಕ್ ಅಚಾರ್ ರ ತಾಯಿ ಚಿನ್ನಮ್ಮ ಆಚಾರ್ ಅವರಿಗೆ, ಪಾಂಡೇಶ್ವರದಲ್ಲಿ ರೈಲ್ವೆ ನಿಲ್ದಾಣದ ಬಳಿ ರಿಕ್ಷಾ ತೊಳೆಯುತ್ತಿದ್ದಾಗ ವಿದ್ಯುತ್ ತಂತಿ ಬಿದ್ದು ಮೃತಪಟ್ಟ ರಾಜು ಅವರ ಪತ್ನಿ ವಿಜಯ ಅವರಿಗೆ ಹಾಗೂ ದೇವರಾಜು ಪತ್ನಿ ಭವಾನಿ ಅವರಿಗೆ ತಲಾ ಒಂದು ಲಕ್ಷ ರೂಪಾಯಿಯ ಪ್ರಾಕೃತಿಕ ವಿಕೋಪದಡಿ ಪರಿಹಾರವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಹಸ್ತಾಂತರಿಸಿದರು.
ಮಾನವೀಯ ನೆಲೆಯಲ್ಲಿ ಪಾಲಿಕೆ ಹಸ್ತಾಂತರ ಮಾಡಿದ ಗರಿಷ್ಟ ಮೊತ್ತ ಇದಾಗಿದೆ. ಮನಪಾ ಸದಸ್ಯರಾದ ಲತೀಫ್,ಮನಪಾ ಸದಸ್ಯರಾದ ಮನೋಜ್ ಕುಮಾರ್,ಜಯಲಕ್ಷ್ಮೀ ಹಾಗೂ ಲೋಹಿತ್ ಅಮೀನ್ ಅವರು ಕೃತಜ್ಞತೆ ಅರ್ಪಿಸಿದರು.