Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಹೆಲಿಕಾಪ್ಟರ್ ಸಂಚಾರ; ಸ್ಥಳ ಬದಲಾವಣೆ

ಮಂಗಳೂರು: ಹೆಲಿಕಾಪ್ಟರ್ ಸಂಚಾರ; ಸ್ಥಳ ಬದಲಾವಣೆ

ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ ಉತ್ಸವ ಪ್ರಯುಕ್ತ ನಡೆಯುತ್ತಿರುವ ಹೆಲಿಕಾಪ್ಟರ್ ಸಂಚಾರದ ನಿಲ್ದಾಣವನ್ನು ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಸಂಚಾರ ಕಾರ್ಯಾಚರಣೆ ನಡೆಸುತ್ತಿತ್ತು. ತಾಂತ್ರಿಕ ಕಾರಣಗಳಿಂದ ಇದನ್ನು ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಹೆಲಿಕಾಪ್ಟರ್‌ನಲ್ಲಿ ನಗರದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಆಕರ್ಷಕವಾಗಿ ವೀಕ್ಷಿಸಬಹುದಾಗಿದೆ. ಹೆಲಿಕಾಪ್ಟರ್ ಪ್ರಯಾಣದ ಪ್ರತಿಟ್ರಿಪ್‌ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು, ಪ್ರತಿ ವ್ಯಕ್ತಿಗೆ 4,500 ರೂ. ದರ ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್ ಸಂಚರಿಸಲು ಆಸಕ್ತರು ಬುಕ್ಕಿಂಗ್‌ಗಾಗಿ ವೆಬ್‌ಸೈಟ್ : www.helitaxii.com (ಮೊಬೈಲ್‌ಸಂಖ್ಯೆ:-9400399999/7483432752) ಸಂಪರ್ಕಿಸಬಹುದಾಗಿದೆ.

RELATED ARTICLES
- Advertisment -
Google search engine

Most Popular