ಮಂಗಳೂರಿನ ಯೆನೆಪೋಯ ವಿವಿಯಲ್ಲಿ ICON YOUTH 2025 ಎಂಬ ಅಂತಾರಾಷ್ಟ್ರೀಯ ಯುವ ಸಮಾವೇಶವು ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಯೆನೆಪೋಯಾ (ಘೋಷಿತ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಮೇ 15 ಮತ್ತು 16, 2025 ರಂದು ವಿವಿ ಆವರಣದಲ್ಲಿ ಆಯೋಜಿಸಲಿದೆ ಎಂದು ಆಯೋಜಕ ಮುಹಮ್ಮದ್ ತಿಳಿಸಿದ್ದಾರೆ.
ಈ ಕುರಿತಂತೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನಗಳ ಬೃಹತ್ ಕಾರ್ಯಕ್ರಮವು ದೇಶದ 20 ರಾಜ್ಯಗಳು ಮಾತ್ರವಲ್ಲದೆ ವಿದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಮ್ಮ ದೇಶದ ಅಸ್ಸಾಂ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಪುಡುಚೇರಿ, ಜಾರ್ಖಂಡ್, ಉತ್ತರಪ್ರದೇಶ, ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ನಿಂದ ಹಾಗೂ ವಿದೇಶ ನೈಜೀರಿಯಾ, ನೇಪಾಳ ಮತ್ತು ಟಿಬೆಟ್ ದೇಶಗಳಿಂದ ಆಗಮಿಸುವ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳನ್ನು ಸೇರಿಸಿ ಹಮ್ಮಿಕೊಳ್ಳಲಾಗಿದೆ.
ಅಲ್ಲದೆ ಶ್ರೀಲಂಕಾ, ರಷ್ಯಾ, ನೈಜೀರಿಯಾ ಮತ್ತು ಥೈಲ್ಯಾಂಡ್‌ನಿಂದ ಅಂತರರಾಷ್ಟ್ರೀಯವಕ್ತಾರರು ಕೂಡಾ ಪಾಲ್ಗೊಳ್ಳಲಿದ್ದಾರೆ ಎಂದರು.