Friday, August 15, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಬುಡೋಳಿ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಬುಡೋಳಿ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು (ದಕ್ಷಿಣ ಕನ್ನಡ): ನುಸ್ರತುಲ್ ಇಸ್ಲಾಂ ಮದ್ರಸ ಹಾಗೂ ಸಮಸ್ತ ಮುಅಲ್ಲಿಂ ಸೆಂಟರ್ ಬುಡೋಳಿ ನೇತೃತ್ವದಲ್ಲಿ
79ನೇ ಸ್ವಾತಂತ್ರೋತ್ಸವ ದಿನಾ‍ಚರಣೆಯನ್ನು ಅತ್ಯಂತ ಸರಳವಾಗಿ, ಸಂಭ್ರಮದಿಂದ ಬುಡೋಳಿ ಮಸೀದಿ ಆವರಣದಲ್ಲಿ ನಡೆಸಲಾಯಿತು. ಬುಡೋಳಿ ಗೌಸಿಯಾ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ತಮೀಮ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಊರ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಇದೇ ವೇಳೆ ವಿದ್ಯಾರ್ಥಿಗಳು ಸಂದೇಶ ಹಾಡನ್ನು ಹಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ, ಪತ್ರಕರ್ತ, ನಿರೂಪಕ ಶಂಶೀರ್ ಬುಡೋಳಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ನಮಗೆಲ್ಲರಿಗೂ ಮಾದರಿ. ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಬೇಕೆಂದರು. ಇನ್ನು ಈ ಕಾರ್ಯಕ್ರಮದಲ್ಲಿ ಹಿರಿಯರಾದ ಅಬೂಬಕ್ಕರ್ ಹಾಜಿ, ಸಿದ್ದೀಕ್, ಇಕ್ಬಾಲ್, ಅಝ್ಗರ್, ಮುಸ್ತಫಾ, ಜಬ್ಬಾರ್ ಹಾಗೂ ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊನೆಯಲ್ಲಿ ಸಿಹಿಹಂಚಿ ಸ್ವಾತಂತ್ರ್ಯ ಶುಭಾಶಯಗಳನ್ನು ವಿನಿಮಯ ಮಾಡಲಾಯಿತು.

RELATED ARTICLES
- Advertisment -
Google search engine

Most Popular