ಮಂಗಳೂರು (ದಕ್ಷಿಣ ಕನ್ನಡ): ಇಝ್ಝತುಲ್ ಇಸ್ಲಾಂ ಮಸೀದಿ ಮತ್ತು ದಾರುಸ್ಸಲಾಂ ಮದ್ರಸ ಕೈಲಾರ್ ಇದರ ಆಶ್ರಯದಲ್ಲಿ ಜಶ್ನೇ ರಬೀಹ್ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಇತ್ತೀಚಿಗೆ ಮಸೀದಿ ವಠಾರದಲ್ಲಿ ನಡೆಯಿತು.
ಜಶ್ನೇ ರಬೀಹ್ ಮೀಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸ್ವಾದಿಕ್ ಅಝ್ ಹರಿ ಕೊಪ್ಪ ಪ್ರಾರ್ಥನೆ ಮಾಡಿದರು. ಮುಹಮ್ಮದ್ ಅಫ್ತಾಝ್ ಫೈಝಿ ಬಜಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಹಮ್ಮದ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು.
ಇದೇ ವೇಳೆ ವೇದಿಕೆಯಲ್ಲಿ ಮುಹಮ್ಮದ್ ಹನೀಫ್, ಉಸ್ಮಾನ್ ಕೈಲಾರ್, ಫೈರೋಝ್ ಬರ್ಕಟ, ಸಲೀಂ ಖಂಡಿಗ, ಸಲಾಂ ಖಂಡಿಗ, ಶಂಸೀರ್ ಬಿ, ಹಾರಿಸ್ K.E.B, ಹಸನಬ್ಬ ಖಂಡಿಗ, ಯಾಕೂಬ್ ಖಂಡಿಗ, ಇಬ್ರಾಹಿಂ (ಇಬ್ಬಜಾಕ), ಅಬ್ದುಲ್ ಹಕೀಂ ಕೈಲಾರ್, ಇಬ್ರಾಹಿಂ ಕೈಲಾರ್, ಅಬೂಬಕ್ಕರ್ ಮದ್ದ, ರಿಯಾಝ್ ಕೈಲಾರ್, ಇಬ್ರಾಹಿಂ ಗುಡ್ಡಮನೆ, ಉಸ್ಮಾನ್ ಬರ್ಕಟ, ಸುಲೈಮಾನ್ ಬರ್ಕಟ, S.M ಇಬ್ರಾಹಿಂ ಬರ್ಕಟ ಹಾಜರಿದ್ದರು. ಇನ್ನು ಅಕ್ಟೋಬರ್ 1 ರಂದು ಸ್ವಲಾತ್ ವಾರ್ಷಿಕ ಹಾಗೂ ಮತ ಪ್ರಭಾಷಣ ಕಾರ್ಯಕ್ರಮ ಕೂಡಾ ನಡೆಯಿತು. ಮೌಲಿದ್ ಪಾರಾಯಣ ಜೊತೆಗೆ ಮಕ್ಕಳ ಕಲಾ ಕಾರ್ಯಕ್ರಮ, ಸರ್ಟೀಫಿಕೇಟ್ ವಿತರಣೆ, ಬಹುಮಾನ ವಿತರಣೆ ಕಾರ್ಯಕ್ರಮ ಕೂಡಾ ನಡೆಯಿತು.