Wednesday, May 21, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಮದ್ರಸಾ ಆಧಾರಿತ ಮಾದಕ ವ್ಯಸನ ವಿರೋಧಿ ಅಭಿಯಾನ: ಗಡಿಯಾರದಲ್ಲಿ ವಿಶೇಷ ಅಸೆಂಬ್ಲಿ

ಮಂಗಳೂರು: ಮದ್ರಸಾ ಆಧಾರಿತ ಮಾದಕ ವ್ಯಸನ ವಿರೋಧಿ ಅಭಿಯಾನ: ಗಡಿಯಾರದಲ್ಲಿ ವಿಶೇಷ ಅಸೆಂಬ್ಲಿ

ಮಂಗಳೂರು ದಕ್ಷಿಣ ಕನ್ನಡ: ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಆಶ್ರಯದಲ್ಲಿ ಮದ್ರಸಾ ಕೇಂದ್ರೀಕರಿಸಿ ನಡೆಸಲ್ಪಟ್ಟ ಮಾದಕ ವ್ಯಸನದ ವಿರುದ್ಧ ಕ್ಯಾಂಪೇನ್ ಪ್ರಯುಕ್ತ ವಿಶೇಷ ಅಸೆಂಬ್ಲಿಯು ಮಿಫ್ತಾಹುಲ್ ಉಲೂಮ್ ಮದ್ರಸಾ ಗಡಿಯಾರದಲ್ಲಿ ನಡೆಯಿತು. ಮದ್ರಸ ಸದರ್ ಉಸ್ತಾದ್ ಶಮೀಮುದ್ದೀನ್ ಹುದವಿ ಮೂಡಿಗೆರೆ ಸ್ವಾಗತಿಸಿದರು.


ಮುಹಿಯದ್ದೀನ್ ಜುಮ್ಮಾ ಮಸೀದಿ ಗಡಿಯಾರ ಖತೀಬ್ ಮುಹಮ್ಮದಲಿ ದಾರಿಮಿ ವಿಷಯ ಮಂಡಿಸಿ ಮಾತನಾಡುತ್ತಾ “ಹಿಂದಿನ ಕಾಲದಲ್ಲಿ ಹಿರಿಯರಿಗೆ ಇಂತಹ ಮಾದಕ ವ್ಯಸನದ ಬಗೆಗಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಪ್ರಸ್ತುತ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಆಯೋಜಿಸುತ್ತಿರುವ ಉದ್ದೇಶ ವ್ಯಾಪಕವಾಗಿ ಈ ಮಾದಕ ವ್ಯಸನ ಹಬ್ಬಿದೆ. ಇದು ವಿಷಾದನೀಯ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಬಹಳ ಜಾಗರೂಕರಾಗಿರಬೇಕು” ಎಂದು ತಿಳಿಸಿದರು.

SKSBV ಅಧ್ಯಕ್ಷ ಅಬ್ದುಲ್ ಫತ್ತಾಹ್ ಮಾದಕ ವ್ಯಸನದ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದರು. ಗಡಿಯಾರ ಮುಹಿಯದ್ದೀನ್ ಜುಮ್ಮಾ ಮಸೀದಿಯ ಲೆಕ್ಕ ಪರಿಶೋಧಕ ಪಿ. ಜೆ. ಅಬ್ದುಲ್ ಅಝೀಝ್ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಸನಾವುಲ್ಲ ಗಡಿಯಾರ, ಇಕ್ಬಾಲ್ ಪಟಿಲ, ಹನೀಫ್ ಮೇಸ್ತ್ರಿ, ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಅಲ್ತಾಫ್ ದಾರಿಮಿ, ಲತೀಫ್ ಅಝ್ಹರಿ ಹಾಗೂ ಮದರಸ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು. ಮದರಸ ವಿದ್ಯಾರ್ಥಿಗಳು ವಿವಿಧ ರೀತಿಯ ಪ್ಲೇ ಕಾರ್ಡ್ ಪ್ರದರ್ಶಿಸಿ ಗಮನ ಸೆಳೆದರು.

RELATED ARTICLES
- Advertisment -
Google search engine

Most Popular