ಮ್ಯಾರೇಜ್ ಬ್ರೋಕರ್ ರೋರ್ವರನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ ಘಟನೆ ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ರಾತ್ರಿ ನಡೆದಿದೆ.
ವಾಮಂಜೂರು ನಿವಾಸಿ ಸುಲೈಮಾನ್ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ವಳಚ್ಚಿಲ್ ನಿವಾಸಿ ಮುಸ್ತಫಾ ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಸುಲೈಮಾನ್ ರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಮೃತ ಸುಲೈಮಾನ್ ಎಂಟು ತಿಂಗಳ ಹಿಂದೆ ಆರೋಪಿ ಮುಸ್ತಫಾ (30) ಮತ್ತು ಶಹನಾಜ್ ಎಂಬ ಮಹಿಳೆಯ ಮದುವೆಗೆ ಅನುಕೂಲ ಮಾಡಿಕೊಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂತರದ ಇವ್ರ ಮಧ್ಯೆ ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ಎರಡು ತಿಂಗಳ ಮೊದಲು ಶಹನಾಜ್ ತನ್ನ ಹೆತ್ತವರ ಮನೆಗೆ ಮರಳಿದ್ದಳು. ಇದು ಮುಸ್ತಫಾ ಮತ್ತು ಸುಲೈಮಾನ್ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು.
ರಾತ್ರಿ ಆರೋಪಿ ಮುಸ್ತಫಾ, ಸುಲೈಮಾನ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸುಲೈಮಾನ್, ತನ್ನ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ವಳಚ್ಚಿಲ್‌ನಲ್ಲಿರುವ ಮುಸ್ತಫಾ ಅವರ ಮನೆಗೆ ಭೇಟಿ ನೀಡಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಮಕ್ಕಳು ರಸ್ತೆ ಬದಿಯಲ್ಲಿ ಕಾಯುತ್ತಿದ್ದಾಗ, ಸುಲೈಮಾನ್ ಮುಸ್ತಫಾ ಅವರೊಂದಿಗೆ ಮಾತನಾಡಲು ಹೋದರು. ಸ್ವಲ್ಪ ಸಮಯದ ನಂತರ, ಸುಲೈಮಾನ್ ಹಿಂದಿರುಗಿ ಚರ್ಚೆ ಫಲಪ್ರದವಲ್ಲ ಮತ್ತು ಅವರು ಹೊರಡಬೇಕು ಎಂದರು.
ಆವಾಗ ಆ ಸಮಯದಲ್ಲಿ ಆರೋಪಿ ಮುಸ್ತಫಾ ತನ್ನ ಮನೆಯಿಂದ ಓಡಿ ಬಂದು ಬ್ಯಾರಿ ಭಾಷೆಯಲ್ಲಿ ಬೆದರಿಕೆಗಳನ್ನು ಹಾಕುತ್ತಾ ಇದ್ದಕ್ಕಿದ್ದಂತೆ ಸುಲೈಮಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕುತ್ತಿಗೆಯ ಬಲಭಾಗದಲ್ಲಿ ಇರಿದಿದ್ದಾನೆ. ಆವಾಗ ಸುಲೈಮಾನ್ ಸ್ಥಳದಲ್ಲೇ ಕುಸಿದು ಬಿದ್ದರು. ಈ ಮಧ್ಯೆ ಆರೋಪಿ ಮುಸ್ತಫಾ ಅವ್ರ ಇಬ್ಬರು ಪುತ್ರರ ಮೇಲೆ ಹಲ್ಲೆ ನಡೆಸಿದ್ದು ಸಿಯಾಬ್ ನ ಎದೆಯ ಎಡಭಾಗದಲ್ಲಿ ಮತ್ತು ರಿಯಾಬ್ ನನ ಬಲ ಮುಂಗೈಗೆ ಅವರನ್ನೂ ಕೊಲ್ಲುವ ಪ್ರಯತ್ನದಲ್ಲಿ ಕತ್ತಿಯಿಂದ ಇರಿದಿದ್ದಾನೆ.

ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಾತ್ರಿ 11ರ ಸುಮಾರಿಗೆ ಪಡೀಲ್ ನಲ್ಲಿರೋ ಖಾಸಗಿ ಆಸ್ಪತ್ರೆಗೆ ಮೂವರನ್ನು ಕರೆದೊಯ್ಯಲಾಯಿತು. ಆವಾಗ ಸುಲೈಮಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇನ್ನು ಗಾಯಗೊಂಡ ರಿಯಾಬ್ ಮತ್ತು ಸಿಯಾಬ್ ಇಬ್ಬರನ್ನೂ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 2023 ರ ಸೆಕ್ಷನ್ 103 (1), 109 (1), 118 (1), 351 (2), 351 (3) ಮತ್ತು 352 ರ ಅಡಿಯಲ್ಲಿ ಅಪರಾಧ ಸಂಖ್ಯೆ 41/2025 ಅನ್ನು ದಾಖಲಿಸಲಾಗಿದೆ.
ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.