Tuesday, April 15, 2025
Google search engine

Homeಅಪರಾಧಮಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ವಿವಾಹಿತ ಯುವಕ ಸಾವು

ಮಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ವಿವಾಹಿತ ಯುವಕ ಸಾವು

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ವಿವಾಹಿತ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಮೃತಪಟ್ಟವರು. ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಮೊನ್ನೆ “ಫ್ಲೋಂಟ್” ಕ್ಲಿನಿಕ್ ಗೆ ತೆರಳಿದ್ದರು. ಮಾಝಿನ್ ರೊಂದಿಗೆ ಅವರ ತಾಯಿ ಮತ್ತು ಪತ್ನಿ ಕೂಡಾ ಇದ್ದು, ಹೊರಗೆ ಕಾಯುತ್ತಿದ್ದರು.

ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಈ ಸಣ್ಣ ಶಸ್ತ್ರ ಚಿಕಿತ್ಸೆಯು ಸಂಜೆಯಾದರೂ ಮುಗಿಯಲಿಲ್ಲ ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಮಾಝಿನ್ ರ ತಾಯಿ ಮತ್ತು ಪತ್ನಿ ವಿಚಾರಿಸಿದಾಗ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ ಎಂಬ ಉತ್ತರ ಲಭಿಸಿದೆ. ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಬಗ್ಗೆ ಶಮನ್ ಇಬ್ರಾಹಿಂ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular