Tuesday, July 8, 2025
Google search engine

Homeರಾಜ್ಯಮಂಗಳೂರು: ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಬೃಹತ್ ರಕ್ತದಾನ ಶಿಬಿರ

ಮಂಗಳೂರು(ದಕ್ಷಿಣ ಕನ್ನಡ): ಪ್ರಾಥಮಿಕ ಅರೋಗ್ಯ ಕೇಂದ್ರ ಬೋಂದೆಲ್, ಹಳೆ ವಿದ್ಯಾರ್ಥಿ ಸಂಘ ಕರಂಬಾರು, ಶ್ರೀನಿವಾಸ್ ಮೆಡಿಕಲ್  ಕಾಲೇಜು,ರೋಟರಿ ಕ್ಲಬ್ ಡೌನ್ ಟೌನ್ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕರಂಬಾರು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಅಧ್ಯಕ್ಷರಾದ ಗಣೇಶ್ ಪ್ರಭು ವಹಿಸಿದ್ದರು.

ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯಧಿಕಾರಿ ಸವಿತಾ ಎಸ್. ಜಿ, ರಕ್ತದಾನದ ಮಹತ್ವದ  ಬಗ್ಗೆ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಮೇಶ್ ಗಟ್ಟಿ ( ಕಾರ್ಯದರ್ಶಿ ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು.), ಡಾ.ಪವನ್ ಚಂದ್ ( ಶ್ರೀನಿವಾಸ್ ಮೆಡಿಕಲ್ ಕಾಲೇಜು ಹೆಚ್ ಓಡಿ, ಮೈಕ್ರೋ ಬಯಲಾಜಿ ),  ಡಾ.ಮಧುಕರ್ ( ಶ್ರೀನಿವಾಸ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಾ ಮೆಡಿಕಲ್ ಆಫೀಸರ್ ), ಉಷಾಕಿರಣ ( ಮುಖ್ಯ ಶಿಕ್ಷಕಿ ಕರಂಬಾರು ಶಾಲೆ), ಲಕ್ಷ್ಮಣ್ ಬಂಗೇರ ( ಅಧ್ಯಕ್ಷರು ಮಹಾಲಕ್ಷ್ಮಿ ದೇವಸ್ಥಾನ ಕರಂಬಾರು,)   ಶೇಖರ್ ಪೂಜಾರಿ ( ಅಧ್ಯಕ್ಷರು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು, ಭರತ್ ಪೂಜಾರಿ ( ಅಧ್ಯಕ್ಷರು ಯುವ ವಾಹಿನಿ ಕರಂಬಾರು ಕೆಂಜಾರು ), ಉಮೇಶ್ ಶೆಟ್ಟಿ ( ಅಧ್ಯಕ್ಷರು ನವಶಕ್ತಿ ಸೇವಾ ಸಂಘ ಮರವೂರು ),  ಸುಧೀರ್ ಪೂಜಾರಿ ( ಅಧ್ಯಕ್ಷರು ತುಳುನಾಡ ತುಳುವೆರ ತುಡರ್ ಫ್ರೆಂಡ್ಸ್ ಕರಂಬಾರು.)    ಶಿವಪ್ರಸಾದ್ ಪೂಜಾರಿ, ( ಅಧ್ಯಕ್ಷರು ಸ್ವಸ್ತಿಕ್ ಫ್ರೆಂಡ್ಸ್ ಕೆಂಜಾರು.) ಹಾಜರಿದ್ದರು.

ರಾಕೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಆಚಾರ್ಯ ವಂದಿಸಿದರು.

ಬೋಂದೆಲ್ ಅರೋಗ್ಯ ಕೇಂದ್ರದಿಂದ ಸಾಂಕ್ರಾಮಿಕ ರೋಗದ ಕ್ಯಾಂಪ್ ಮತ್ತು ಅಯುಷ್ಮಾನ್ ಭಾರತ್ ಕುರಿತು ಮಾಹಿತಿ ನೀಡಲಾಯಿತು.

RELATED ARTICLES
- Advertisment -
Google search engine

Most Popular