Friday, April 11, 2025
Google search engine

Homeರಾಜ್ಯಬಾಡಿಗೆ ಪಾವತಿಸದ ಅಂಗಡಿಗಳನ್ನು ಜಪ್ತಿ ಮಾಡಿದ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು

ಬಾಡಿಗೆ ಪಾವತಿಸದ ಅಂಗಡಿಗಳನ್ನು ಜಪ್ತಿ ಮಾಡಿದ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಮಹಾನಗರಪಾಲಿಕೆಯ ಒಡೆತನಕ್ಕೊಳಪಟ್ಟ ನವೀಕೃತ ಅಳಕೆ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದಿರುವ ಬಾಡಿಗೆದಾರರು ಅಂಗಡಿ ಬಾಡಿಗೆಯನ್ನು ಇದುವರೆಗೆ ಪಾವತಿಸದೇ ಇರುವ ಹಿನ್ನೆಲೆಯಲ್ಲಿ  ಪಾಲಿಕೆ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಸದ್ರಿ ಮಾರುಕಟ್ಟೆಗೆ ತೆರಳಿ ಮಳಿಗೆಗಳನ್ನು ಜಫ್ತಿ ಮಾಡಿ, ಪಾಲಿಕೆ ಸುಪರ್ದಿಗೆ ಪಡಕೊಂಡಿರುತ್ತಾರೆ.

ಕಳೆದ ಹಲವಾರು ತಿಂಗಳಿಂದ ಪದೇ ಪದೇ ನೋಟೀಸು ನೀಡಲಾಗಿದ್ದರೂ, 10 ಅಂಗಡಿ ಮಳಿಗೆದಾರರು ಬಾಡಿಗೆಯನ್ನು ಪಾವತಿಸದೇ, ಸುಮಾರು 28 ಲಕ್ಷ ಮೊತ್ತವನ್ನು ಬಾಕಿ ಇಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಸುಪರ್ದಿಗೆ ಪಡೆಯುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ರೀತಿಯ ಕಟ್ಟುನಿಟ್ಟಾದ ಕ್ರಮ ಕೈಗೊಂಡ ಪರಿಣಾಮವಾಗಿ ಬಾಡಿಗೆ ಪಾವತಿಸಲು ಮುಂದೆ ಬಂದಿದ್ದಾರೆ.

RELATED ARTICLES
- Advertisment -
Google search engine

Most Popular