Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು:ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ನಾಡ ದೋಣಿಗಳ ಮೆರವಣಿಗೆ

ಮಂಗಳೂರು:ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ನಾಡ ದೋಣಿಗಳ ಮೆರವಣಿಗೆ

ಮಂಗಳೂರು (ದಕ್ಷಿಣ ಕನ್ನಡ): ಡಿವೈಎಫ್ಐ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಇಂದು ಮಂಗಳೂರಿನ ಬೆಂಗರೆಯ ಪಲ್ಗುಣಿ ನದಿಯಲ್ಲಿ ನಾಡ ದೋಣಿಗಳ ಮೆರವಣಿಗೆ ನಡೆಯಿತು. ಡಿವೈಎಫ್ಐ ನ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ , ಸಾಮರಸ್ಯ, ಘನತೆಯ ಬದುಕಿಗಾಗಿ ಘೋಷಣೆಯಡಿ ನಡೆಯುವ ಡಿವೈಎಫ್ಐ ರಾಜ್ಯ ಸಮ್ಮೇಳನದಲ್ಲಿ ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಪ್ರಭಲ ಚಳುವಳಿಗಳನ್ನು ಮುನ್ನಡೆಸಲಿದೆ.

ಬಡವರ ಮನೆಯ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ, ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಬದಲಾಗಿ ಮತೀಯ ರಾಜಕಾರಣಗಳಲ್ಲಿ ತೊಡಗಿಸಿ ಬಲಿಕೊಡುವ ಹುನ್ನಾರಗಳನ್ನು ವ್ಯವಸ್ಥಿತವಾಗಿ ನಡೆಸುವ ಬಿಜೆಪಿ ಪಕ್ಷದ ಜನವಿರೋಧಿ ನೀತಿಗಳನ್ನು ಬಯಲುಗೊಳಿಸಬೇಕಾಗಿದೆ ಎಂದರು
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ದೋಣಿ ಮುನ್ನಡೆಸುವ ಕೈ ದಂಡನ್ನು ಹಸ್ತಾಂತರಿಸಿ ಚಾಲನೆ ನೀಡಿದರು.

ಈ ವೇಳೆ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ಮನೋಜ್ ವಾಮಂಜೂರು, ರಜಾಕ್ ಮೊಂಟೆಪದವು, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಜಾಕ್ ಮುಡಿಪು, ಧಿರಾಜ್ ಬಜಾಲ್, ಯೋಗಿತಾ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತ್ರತ್ವವನ್ನು ಬೆಂಗರೆ ಗ್ರಾಮ ಸಮಿತಿ ಮುಖಂಡರಾದ ತಯ್ಯೂಬ್ ಬೆಂಗರೆ, ಹನೀಫ್ ಬೆಂಗರೆ, ನೌಶದ್ ಬೆಂಗರೆ, ಪಿಜಿ ರಫೀಕ್, ಜುಬೈರ್, ಮುಹಾಝ್, ತಂನ್ಜಿಲ್, ನಾಸಿರ್ ಬಾಸ್, ರಫೀಕ್ , ಶಾಹಿಲ್ , ಪಲ್ಗುಣಿ ಸಾಂಪ್ರದಾಯಿಕ ದೋಣಿ ಸಂಘದ ಮುಖಂಡರಾದ ಸಾಧಿಕ್, ಸರ್ಫರಾಜ್, ಫಹಾಝ್, ಇಮ್ರಾನ್ ಮುಂತಾದವರು ವಹಿಸಿದ್ದರು.

RELATED ARTICLES
- Advertisment -
Google search engine

Most Popular