ಮಂಗಳೂರು(ದಕ್ಷಿಣ ಕನ್ನಡ): ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣಾ ಅಕ್ರ ನಂ.26/2010 U/S 174 (ಎ) IPC ಪ್ರಕರಣದಲ್ಲಿ ಭಾಗಿಯಾದ ಆರೋಪಿ ಮೊಹಮ್ಮದ್ ಹನೀಪ್ @ಗುಜರಿ ಹನೀಫ್ ಎಂಬುವವರು ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಈ ಪ್ರಕರಣವನ್ನು ನ್ಯಾಯಾಲಯವು LPC ಪ್ರಕರಣವೆಂದು ಪರಿಗಣಿಸಿರುತ್ತದೆ. LPC ವಾರಂಟ್ ಆಸಾಮಿಯನ್ನು ಬಂದಿಸುವಲ್ಲಿ ಕೇಂದ್ರ ವಿಭಾಗ ಎಸಿಪಿ ಮಹೇಶ್ ಕುಮಾರ್ ರವರ ನಿರ್ದೇಶನದಂತೆ ಉತ್ತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಅಜ್ಮತ್ ಅಲಿ ರವರ ಮಾರ್ಗದರ್ಶನದಂತೆ ಠಾಣಾ ಪಿಎಸ್ ಐ ವಿನಾಯಕ ತೋರಗಲ್ ಮತ್ತು ಸಿಬ್ದಂದಿಗಳಾದ ಹೆಚ್ ಸಿ 887 ನೇ ಚಂದ್ರಹಾಸ್ ಸನೀಲ್ ಹಾಗೂ ಪಿಸಿ ಆನಂದ್ ರವರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.