ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಬಿಕರ್ನಕಟ್ಟೆಯ ಅಪ್ಪನುಲ್ ಮಸ್ಟಿದ್ ಕಬರಸ್ಥಾನಕ್ಕೆ ಸಂಬಂಧಿಸಿ ವಿವಾದಕ್ಕೀಡಾಗಿದ್ದು, ನ್ಯಾಯಕ್ಕೆ ಆಗ್ರಹಿಸಿ ಮಸೀದಿಯವರು ಧರಣಿ ನಡೆಸಿದ ಘಟನೆ ನಡೆದಿದೆ.
ಈ ಮಸೀದಿಯ ಬಳಿಯಿರುವ ಕಬರಸ್ಥಾನದ ಜಾಗವನ್ನು ಅತಿಕ್ರಮಿಸಿ ಅಲ್ಲಿ ಕಟ್ಟಡ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಪಿಸಿರುವ ಧರಣಿ ನಿರತರು ನ್ಯಾಯಕ್ಕಾಗಿ ಶಾಂತಿಯುತ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಈ ಜಮೀನು ಮಸೀದಿಯ ಹೆಸರಿನಲ್ಲಿದೆ. ಇಲ್ಲಿನ ಕಬರಸ್ಥಾನದಲ್ಲಿ ನಮ್ಮ ಹಿರಿಯರನ್ನು ದಫನ ಮಾಡಲಾಗಿದೆ. ಇದೀಗ ಕೆಲವರು ಇದನ್ನು ಅತಿಕ್ರಮಿಸಿ ರಾತ್ರೋ ರಾತ್ರಿ ಸಮತಟ್ಟು ಮಾಡಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇದು ಮಸೀದಿಗೆ ಸಂಬಂಧಪಟ್ಟ ಜಮೀನು ಎಂಬುದಕ್ಕೆ ನಮ್ಮಲ್ಲಿ ಎಲ್ಲಾ ದಾಖಲೆಯೂ ಇದೆ. ನ್ಯಾಯಾಲಯದಲ್ಲೂ ದಾವೆ ಹೂಡಿದ್ದೇವೆ ಎಂದು ಹೇಳಿದ್ದಾರೆ.