ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಪಾಲಿಕೆ ಕಚೇರಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸದಸ್ಯರ ನಡುವೆ ತೀವ್ರ ರೀತಿಯ ವಾಕ್ಸಮರ ಉಂಟಾಯಿತು.
ಸದಸ್ಯರ ಪರಸ್ಪರ ಮಾತಿನ ಚಕಮಕಿ ನಡುವೆ ಸದನ ಗದ್ದಲಕ್ಕೆ ಒಳಗಾಯಿತು. ವಿಪಕ್ಷ ಸದಸ್ಯರೊಬ್ಬರು ಕಾರ್ಡ್ ಲೆಸ್ ಮೈಕ್ ಆನ್ ಆಗದೇ ಇದ್ದಾಗ ಅದನ್ನು ನೆಲಕ್ಕೆ ಬಡಿದ ಘಟನೆಯೂ ನಡೆಯಿತು.
ನಿಗದಿಯಂತೆ ಮಂಗಳಾ ಸಭಾಂಗಣದಲ್ಲಿ ಸಭೆ ಆರಂಭಗೊಂಡು ಮೇಯರ್ ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಿಸುವ ಜೊತೆ ತಾವು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹಾಗೂ ಸದಸ್ಯರು ಮೇಯರ್ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿ ಮೇಯರ್ ಪೀಠದೆದುರು ತೆರಳಿ ಮೇಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.