ಮಂಗಳೂರು(ದಕ್ಷಿಣ ಕನ್ನಡ): ಹರೇಕಳ ಗ್ರಾಮದ ಹೃದಯ ಭಾಗವಾದ ನ್ಯೂಪಡ್ಪುವಿನ ರಾಜರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ನಿನ್ನೆಯಿಂದ ಎಡೆಬಿಡದೇ ಸುರಿಯುತ್ತಿರುವ ಧಾರಕಾರ ಮಳೆಗೆ ತಡೆಗೋಡೆ ಗೋಡೆ ಶಿಥಿಲಗೊಂಡು ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ, ಜನ ಸಂಚಾರವಿರದೇ ಸಂಭಾವ್ಯ ಬಾರಿ ದೊಡ್ಡ ಅನಾಹುತ ತಪ್ಪಿದೆ.
ಸ್ಥಳಕ್ಕೆ ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್, ಪಂಚಾಯತ್ ಸದಸ್ಯರಾದ ಬದ್ರುದ್ದೀನ್, ಅಬ್ದುಲ್ ಸತ್ತಾರ್, ಅಬ್ದುಲ್ ಬಶೀರ್ SM ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತ್ವಾಹ ಜುಮಾ ಮಸ್ಜಿದ್ ಆಡಳಿತ ಕಮಿಟಿ ಮೊಹಲ್ಲಾದ ಯುವಕರೊಂದಿಗೆ ಸೇರಿಕೊಂಡು ರಸ್ತೆಯ ಅಡೆತಡೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಸೂಕ್ತ ಪರಿಹಾರಕ್ಕೆ ಮಸೀದಿ ಆಡಳಿತ ಕಮಿಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದೆ.