ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎದುರು – ಬದುರು ಮನೆಯ ನಿವಾಸಿಗಳಿಬ್ಬರು ನಿನ್ನೆ ಒಂದೇ ದಿನ ನಿಧನರಾದರು.
ಅಬ್ದುರ್ರಹ್ಮಾನ್ ಮೇಸ್ತ್ರಿ (54) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರೆ ಅವರ ಮೃತದೇಹವನ್ನು ನೋಡಿ ಸ್ವಗೃಹಕ್ಕೆ ಬಂದ ಎದುರು ಮನೆಯ ಹನೀಫ್ ಸಾಹೇಬ್ (65) ಹೃದಯಾಘಾತದಿಂದ ನಿಧನ ಹೊಂದಿದರು.
ಅಬ್ದುರ್ರಹ್ಮಾನ್ ಮೇಸ್ತ್ರಿ ಅವರು ಮೂಲತಃ ವಿಟ್ಲ ಸಮೀಪದ ಒಕ್ಕೆತ್ತೂರು – ಕೊಡಂಗೆ ನಿವಾಸಿಯಾಗಿದ್ದು ಇತ್ತೀಚೆಗೆ ಭಗವಂತಕೋಡಿ ಯಲ್ಲಿ ಮನೆ ಖರೀದಿಸಿ ವಾಸವಾಗಿದ್ದರು.