Friday, April 18, 2025
Google search engine

Homeರಾಜ್ಯಮಂಗಳೂರು: ಯುದ್ಧ ಸ್ಮಾರಕ ಕಾಮಗಾರಿಯ ಗುದ್ದಲಿ ಪೂಜೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ

ಮಂಗಳೂರು: ಯುದ್ಧ ಸ್ಮಾರಕ ಕಾಮಗಾರಿಯ ಗುದ್ದಲಿ ಪೂಜೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ  ಡಿ.ವೇದವ್ಯಾಸ್ ಕಾಮತರ 25 ಲಕ್ಷ ರೂಪಾಯಿ ವಿಶೇಷ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡ್ ನಲ್ಲಿರುವ ಯುದ್ಧ ಸ್ಮಾರಕದ ಕಾಮಗಾರಿಯ ಗುದ್ದಲಿ ಪೂಜೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ರವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ದೇಶ ಕಾಯುವ ಹುತಾತ್ಮ ಯೋಧರ ನೆನಪಿಗಾಗಿ ನಿರ್ಮಿಸಲಾಗಿದ ಯುದ್ಧ ಸ್ಮಾರಕದ ಅಭಿವೃದ್ಧಿ ಮಾಡುವ ಭಾಗ್ಯ ಈ ಭಾಗದ ಜನಪ್ರತಿನಿಧಿಗಳಿಗೆ ಸಿಕ್ಕಿರುವುದು ಪುಣ್ಯ ಕಾರ್ಯ. ಯುದ್ದ ಸ್ಮಾರಕದ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ರ 25 ಲಕ್ಷ ವಿಶೇಷ ಅನುದಾನ ಲಭಿಸಿದ್ದು, ಮನಪಾ ಉಳಿದ ಖರ್ಚು ಭರಿಸುವ ಭರವಸೆ ನೀಡಿದೆ. ಅಂತೆಯೇ ನಾನು ಕೂಡಾ ನನ್ನ ಒಂದು ತಿಂಗಳ ವೇತನವಾದ 1 ಒಂದು ಲಕ್ಷವನ್ನು ಈ ಪುಣ್ಯ ಕಾರ್ಯಕ್ಕೆ ಸಮರ್ಪಿಸುತ್ತೇನೆ ಎಂದು ಘೋಷಿಸಿದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಸೈನಿಕರು ಈ ದೇಶದ ಹೆಮ್ಮೆ. ಅವರ ತ್ಯಾಗಕ್ಕೆ ಎಂದಿಗೂ ಸಾಟಿಯಿಲ್ಲ. ಅವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು,

ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಕಮಲಾಕ್ಷಿ, ಕುಸುಮ ದೇವಾಡಿಗ, ಸಂದ್ಯಾ ವೆಂಕಟೇಶ್, ಕ್ಯಾ. ಗಣೇಶ್ ಕಾರ್ಣಿಕ್, ಮನಪಾ ಸದಸ್ಯರುಗಳು, ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular