Tuesday, March 31, 2026
Google search engine

Homeರಾಜ್ಯಮಂಗಳೂರಲ್ಲಿ ಜನಗಣತಿ: 909 ಗಣತಿ ಸಿಬ್ಬಂದಿಗಳ ನೇಮಕ

ಮಂಗಳೂರಲ್ಲಿ ಜನಗಣತಿ: 909 ಗಣತಿ ಸಿಬ್ಬಂದಿಗಳ ನೇಮಕ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಜನಗಣತಿ 2027 ಕಾರ್ಯವನ್ನು ನಡೆಸುವ ಉದ್ದೇಶದಿಂದ ಒಟ್ಟು 909 ಗಣತಿ ಸಿಬ್ಬಂದಿಗಳನ್ನು (enumerators) 7 ಚಾರ್ಜ್ ಅಧಿಕಾರಿಗಳ‌ ಅಧೀನದಲ್ಲಿ ನೇಮಕ ಮಾಡಲಾಗಿದೆ. ಇದಲ್ಲದೆ, ಸ್ವಯಂ ಗಣತಿ (Self Enumeration) ಪ್ರಕ್ರಿಯೆ 01-04-2026 ರಿಂದ 15-04-2026 ರವರೆಗೆ ನಡೆಯಲಿದೆ. ನಾಗರೀಕರು ಸುರಕ್ಷಿತ ಒನ್ ಲೈನ್‌ ಪೋರ್ಟಲ್‌ (www.sc.census.gov.in) ಮೂಲಕ ವಯಕ್ತಿಕವಾಗಿ ತಮ್ಮದೇ ಆದ ಮಾಹಿತಿಗಳನ್ನು ಭರ್ತಿ ಮಾಡಲು ಅನುಕೂಲ ಮಾಡಿ ಕೊಡಲಾಗಿದೆ.
ಗಣತಿ ಸಿಬ್ಬಂದಿಗಳಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೆಲ ಗಣತಿ ಸಿಬ್ಬಂದಿಗಳು ಸಮಂಜಸವಲ್ಲದ ಕಾರಣಗಳನ್ನು ನೀಡುತ್ತಾ ತರಬೇತಿಗೆ ಗೈರುಹಾಜರಾಗಿರುವುದು ಗಮನಕ್ಕೆ ಬಂದಿದೆ. ಭಾರತದ ಜನಗಣತಿ ಕಾರ್ಯದ ಯಶಸ್ವಿ ಅನುಷ್ಠಾನಕ್ಕೆ ತರಬೇತಿ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸಂಬಂಧಿಸಿದ ಎಲ್ಲಾ ಗಣತಿ ಸಿಬ್ಬಂದಿಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಿದ್ಧರಾಗಿರಬೇಕು. ಎಲ್ಲಾ ಚಾರ್ಜ್ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಗಣತಿ ಸಿಬ್ಬಂದಿಗಳ ಹಾಜರಾತಿಯನ್ನು ಖಚಿತಪಡಿಸಿ, ಅಗತ್ಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಭಾರತದ ಜನಗಣತಿ ಕಾಯಿದೆ, 1948 (Census Act, 1948) ಅದರಡಿ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಗೈರುಹಾಜರಾದ ಗಣತಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಮುಂದಿನ ತರಬೇತಿಗೆ ಅವರು ಕಡ್ಡಾಯವಾಗಿ ಹಾಜರಾಗಬೇಕಾಗಿದ್ದು ಪಾಲನೆ ಮಾಡದವರ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದವರು ಕಟ್ಟುನಿಟ್ಟಾಗಿ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular