Friday, April 4, 2025
Google search engine

Homeಅಪರಾಧಮಂಗಳೂರು: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಮಂಗಳೂರು: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಮಂಗಳೂರು (ದಕ್ಷಿಣ ಕನ್ನಡ): ಯುವಕನೋರ್ವ ಅತೀ ಎತ್ತರದ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಮೂಲ್ಕಿ ಸಮೀಪದ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಟವರ್ ಏರಿದವನನ್ನು ಬಿಜಾಪುರ ಜೇವರ್ಗಿ ಮೂಲದ ಯುವಕ ಸತೀಶ್ ಎಂದು ಗುರುತಿಸಲಾಗಿದೆ.
ಮೊಬೈಲ್ ಟವರ್ ಗೆ ಏರಿದ ಕಾರಣ ಜನರಿಗೆ ಪುಕ್ಕಟೆ ಮನರಂಜನೆ ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾನೆ. ಸುಮಾರು 100 ಮೀಟರ್ ಕ್ಕಿಂತಲೂ ಎತ್ತರದ ಮೊಬೈಲ್ ಟವರ್ ಏರಿದ ಯುವಕ ಟವರ್ ನ ತುತ್ತ ತುದಿಗೆ ಹೋಗಿ ವಿವಿಧ ಚೇಷ್ಟೆ ಗಳನ್ನು ಮಾಡುತ್ತಾ ಕುಳಿತ್ತಿದ್ದ. ಕೂಡಲೇ ಸ್ಥಳೀಯರು ಮುಲ್ಕಿ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಮೈಕ್ ಮೂಲಕ ಆತನಿಗೆ ಸಮಾಧಾನ ಮಾಡಿ ಕೆಳಗೆ ಬರಲು ಪ್ರಯತ್ನಿಸುತ್ತಿದ್ದರೂ ಪ್ರಯತ್ನ ವ್ಯರ್ಥವಾಯಿತು. ಸುಮಾರು ನಾಲ್ಕು ತಾಸುಗಳ ಬಳಿಕ ಆತ ತಾನಾಗಿಯೇ ಇಳಿಯುತ್ತಲೇ ಆತಂಕ ದೂರವಾಯಿತು.
ಸುಮಾರು ನಾಲ್ಕು ತಾಸಿನ ಬಳಿಕ ಕೆಳಗಿಳಿದ ಆತ ನಮ್ಮ ಬಿಜಾಪುರ ಬಾಗಲಕೋಟೆಯಲ್ಲಿ ರಸ್ತೆ ಮತ್ತು ಇತರ ಸಮಸ್ಯೆಗಳು ಬಹಳಷ್ಟು ಇರುವುದರಿಂದ ನಾನು ಇಲ್ಲಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಹೇಳಿ ಬೆಚ್ಚಿ ಬೀಳಿಸಿದ್ದಾನೆ.

RELATED ARTICLES
- Advertisment -
Google search engine

Most Popular