ಮಂಗಳೂರು(ದಕ್ಷಿಣ ಕನ್ನಡ): ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತ ಗೂಂಡಾಗಿರಿ ನಡೆಸಿರುವ ಘಟನೆ ವರದಿಯಾಗಿದೆ.
ಮತಗಟ್ಟೆಯ ನೂರೂ ಮೀಟರ್ ಅಂತರದಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಅಧಿಕಾರಿಯನ್ನು ತಳ್ಳಾಡಿ ಪುಂಡಾಟ ಮೆರೆದ ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು, ವಾಗ್ವಾದ ನಡೆಸಿದ್ದಾನೆ.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದ ವೇಳೆ ಪದ್ಮರಾಜ್ ಪೂಜಾರಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತನಿಂದ ಪುಂಡಾಟ ಮೆರೆದ ಘಟನೆ ನಡೆದಿದೆ.
ವಿಡಿಯೋ ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೆ ಬಿಜೆಪಿ ಕಾರ್ಯಕರ್ತ ಹರಿಹಾಯ್ದಿದ್ದಾರೆ.