ಮಂಗಳೂರು ಲಿಟ್ ಫೆಸ್ಟ್ ಜನವರಿ 10, 11 ರಂದು ಮಂಗಳೂರಿನ ಟಿಎಂಎ ಪೈ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಲಕರ್ಣಿ ಹೇಳಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2026 ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರಾದ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಪದ್ಮಭೂಷಣ ಎಸ್ ಎಲ್ ಭೈರಪ್ಪ ಗೌರವಾರ್ಥ ಶತಾವಧಾನಿ ಆರ್.ಗಣೇಶ್ ಮತ್ತು ಜಿಬಿ ಹರೀಶ್ ರಿಂದ ವಿಶೇಷ ಗೋಷ್ಟಿ ನಡೆಯಲಿದೆ ಅಂದರು. ಬೊಂಬೆಯಾಟ ಪ್ರದರ್ಶನ, ಪುಸ್ತಕ ಪ್ರದರ್ಶನ, ಮಾರಾಟ ಮೇಳ ನಡೆಯಲಿದೆ ಅಂದರು. ಸುದ್ದಿಗೋಷ್ಟಿಯಲ್ಲಿ
ಭಾರತ್ ಫೌಂಡೇಶನ್ ಸದಸ್ಯರಾದ ದುರ್ಗಾರಾಮ್ ಪ್ರಸಾದ್ ಕಟೀಲ್, ಸುಜೀತ್ ಪ್ರಸಾದ್ ಉಪಸ್ಥಿತರಿದ್ದರು.
- ಶಂಶೀರ್ ಬುಡೋಳಿ



