ಮಂಗಳೂರು (ದಕ್ಷಿಣ ಕನ್ನಡ): ಬ್ಯಾಟರಿ ರಿಕ್ಷಾಗಳಿಗೆ ಮತ್ತಿತರ ರಿಕ್ಷಾಗಳಿಗೆ ಒಂದೇ ರೀತಿಯ ಕಾನೂನು ಜಾರಿಗೆ ಒತ್ತಾಯಿಸಿ, ತಮಿಳ್ನಾಡು ರಾಜ್ಯ ಸರಕಾರದ ರೀತಿಯಲ್ಲಿ ತಿದ್ದುಪಡಿಗೆ ಆಗ್ರಹಿಸಿ ದಕ್ಷಿಣ ಕನ್ನಡ. ಜಿಲ್ಲಾ ಅಟೋ ಚಾಲಕರ ಸಂಘ ಹಾಗೂ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ನಗರದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಡೋಲು ಜಾಗಟೆ ಬಾರಿಸಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಎಚ್ಚರಿಸಿದ ರಿಕ್ಷಾ ಚಾಲಕರು ಅ.17ರಂದು ರಿಕ್ಷಾ ಚಾಲಕರ ಧರಣಿ ಸಂದರ್ಭ ಸಂಸದರು, ಶಾಸಕರು ನೀಡಿದ ಆಶ್ವಾಸನೆ ಜಾರಿಗೊಳಿಸಬೇಕು. ಡಿ.9ರಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.